ಮಾಯದ ಗಾಯ
ಯಾವಾಗ ಮಳೆ ಬರುವುದೋ
ಕಾಯುವ ಆ ದಿನ
ಯಾವಾಗ ಮಳೆ ನಿಲ್ಲುವುದೋ
ಕಾಯುವ ಈ ದಿನ
ದಿನಾ ಕಾಯುವ ಈ ದಿನಕರ
ತೋಯಗಳಲಿ ತುಯ್ಯಲಾಟ
ಘನವ ನಾನೇನು ಬಲ್ಲೆ
ಗೂಡು ಕಟ್ಟಿದ ಹಕ್ಕಿ
ಅಂಗಣದಲಿ ಹಾರಾಟ
ಗೂಡು ಘನವೇ ಕಿರಿದಾಗದು ತತ್ತಿ
ತತ್ತಿ ಘನವೇ ಕಿರಿದಾಗದು ಪ್ರಾಣ
ಪ್ರಾಣ ಘನವೇ ಕಿರಿದಾಗದು ಹಾರುವ ಹಕ್ಕಿ
ತತ್ತಿಯೊಳಗಣ ಆ ಹಕ್ಕಿ ಪ್ರಾಣ
ಗೂಡಲ್ಲಿ ಅಡಗಿತ್ತು
ಕಾಮದ ತುಂಟಾಟ
ಮೋಹದ ಮಿಂಡಾಟ
ಕ್ರೋಧದ ಛಲದಾಟ
ಮದದ ಹಮ್ಮಿನಾಟ
ಲೋಭದ ಜೂಜಾಟ
ಮತ್ಸರದ ಹೊಗೆಯಾಟ
ಆಡಿ ಕೆಡದಿರೆ ನಿಬ್ಬೆರಗು
ಮಾಯದ ಗಾಯವ
ನೆನಹು ನೆಕ್ಕಿತ್ತು
ಕಣ್ಣೊಳಗಣ ಬಿಂಬದ ಗೊಂಬೆ
ನೀರಾಯಿತು.





Comments 3
ಕುಸುಮಾ ತಂಗಡಗಿ
Oct 27, 2025ನೆನಪುಗಳು ಯಾವತ್ತೂ ಗಾಯವನ್ನು ಮಾಯಲು ಬಿಡುವುದಿಲ್ಲಾ😟
ಸುಂದರ್ ಪೌಳಿ
Nov 7, 2025ಕಣ್ಣ ಬಿಂಬ ಮನದ ಬಿಂಬ, ಬಿಂಬ ಅಳಿದರೆ ಎಲ್ಲವೂ ಶೂನ್ಯ… ಯಾವುದು ಹಿರಿದು, ಯಾವುದು ಕಿರಿದು?… ಚೆನ್ನಾಗಿದೆ ಕವನ.
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Nov 25, 2025ಓದಿಗೆ… ಸಂತಸ.