Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮನವೇ ಮನವೇ…
Share:
Poems May 6, 2020 Bayalu

ಮನವೇ ಮನವೇ…

ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ
ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ//

ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ
ವಿಲವಿಲ ಎನ್ನುತ ನಲುಗಿದೆ ನೀನು ನಲಿವಿಲ್ಲ ಮನವೇ
ಒಲವಿಂದಲೆ ನೀ ಬಲೆ ಮೂರಕ್ಕೆ ಬಲಿಯಾದೆ ಮನವೇ
ನೆಲೆ ತಾನರಿಯದೆ ಅಲೆಯುವ ಸೊಣಗ ಅಲೆದಂತೆ ಮನವೇ //1//

ಹರಿಯುವ ನೀರಿಗೆ ಬೆರಳಿಟ್ಟುಂಡರೆ ಹಿರಿದುಂಟೇ ಮನವೇ
ಕರಿ ಕುನ್ನಿಯು ತಾ ಕೆರ ಕಚ್ಚಾಡಲು ಸಿರಿಯುಂಟೇ ಮನವೇ
ಉರಗನ ಬಾಯಲಿ ಇರುತಿಹ ಕಪ್ಪೆಯ ಪರಿನೀನೆಲೆ ಮನವೇ
ಮರಣದ ಬಾಧೆ ಬರುತಿದೆ ಮುಂದೆ ಮೆರೆಯದಿರು ಮನವೇ //2//

ಸಿರಿ ಸುಖವೆಲ್ಲ ಹಿರಿ ಸಂತೆಯು ತಾ ಕರಗುವ ಪರಿಮನವೇ
ಮರುತಗೆ ಇದಿರು ಉರಿಯುವ ಜ್ಯೋತಿ ಇರಲುಂಟೇ ಮನವೇ
ಹಿರಿಹಿರಿ ನಂಬಿದೆ ಕರಗುವ ಸಿರಿಯನೆ ಮರುಳಾದೆಲೆ ಮನವೇ
ಗುರಿಯನು ಕಾಣದೆ ಧರೆ ಸಿರಿಯೊಳಗೆ ಚರಿಸದಿರು ಮನವೇ //3//

ಇಳೆಯಲ್ಲಾಡುತ ಒಳಬೆಳಗನ್ನು ಕಳೆದೆ ಎಲೆ ಮನವೇ
ಒಳ ಸೇರುತ ನೀ ಕಳೆಬೆಳಗಿನೊಳು ಮುಳುಗುತಲಿರು ಮನವೇ
ಇಳೆಯನು ಬೆಳಗುವ ಇನಶಶಿ ಎಲ್ಲ ಒಳಗಿವೆ ತಿಳಿ ಮನವೇ
ಅಳಿಯದ ಬೆಳಗು ಒಳಗಿದೆ ತಿಳಿದು ತಿಳಿಯಾಗಲೆ ಮನವೇ //4//

ಸನ್ನುತ ಶರಣರ ಬೆನ್ನಿಗೆ ಬೀಳು ಉನ್ನತಿ ಎಲೆ ಮನವೇ
ಬನ್ನವ ಅಳಿಸಿ ರನ್ನವ ತಿಳಿಸುವರಿನ್ನಾರೆಲೆ ಮನವೇ
ಅನ್ಯವ ತೊರೆಸಿ ಭಿನ್ನವ ಕಳೆಯುವರಿನ್ನಾರೆಲೆ ಮನವೇ
ಮುನ್ನಿನ ನಿರವಯಲುನ್ನತ ನಿನ್ನೊಳು ತೋರುವರೆಲೆ ಮನವೇ //5//

-ಮಹಾಲಿಂಗ ಶಿವಯೋಗಿಗಳು

Previous post ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
Next post ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು

Related Posts

ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...
ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...

Comments 2

  1. B.S.Patil
    May 14, 2020 Reply

    ಮನವೇ ತತ್ವಪದ ಓದುತ್ತಾ ಹೋದಂತಡ ಹಾಡಿಸಿಕೊಳ್ಳತೊಡಗಿತು. ಒಂದೊಂದು ಸಾಲೂ ಬಹಳ ಹಿಡಿಸಿದವು. ಶ್ರೀಗಳಿಗೆ ಶರಣು.

  2. Channappa Vali
    May 14, 2020 Reply

    ಮನವೇ ಮನವೇ… ಮತ್ತು ಹೆಸರಿಲ್ಲದಾ ಊರಿನ ಹಾಡು ಎರಡೂ ಬಹಳ ಚನ್ನಾಗಿವೆ. ಸ್ವರ ವಚನಗಳನ್ನು ಓದಿದಂತೆ ಭಾಸವಾಯಿತು. ಎರಡಕ್ಕೂ ರಾಗ ಹಾಕಿ ಹಾಡುವಂತಿವೆ. ಪ್ರತಿ ಸಾಲುಗಳೂ ಮನನಯೋಗ್ಯವಾಗಿವೆ.

Leave a Reply to Channappa Vali Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಯುವಕರ ಹೆಗ್ಗುರುತು: ಚನ್ನಬಸವಣ್ಣ
ಯುವಕರ ಹೆಗ್ಗುರುತು: ಚನ್ನಬಸವಣ್ಣ
November 10, 2022
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ನೋಟದ ಕೂಟ…
ನೋಟದ ಕೂಟ…
May 10, 2023
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಮನವೇ ಮನವೇ…
ಮನವೇ ಮನವೇ…
May 6, 2020
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
Copyright © 2026 Bayalu