
ಮಣ್ಣಿನ ಹೃದಯದಲಿ
ಅಳಿದ ಮೇಲೆ ಉಳಿಯುವುದೇನು?
ಕೇವಲ ಕುರುಹು ಅಷ್ಟೇ!
ಗಾಳಿ ಬೀಸಿದಾಗ
ಎಲೆ ಉದುರಿದ ಹಾಗೇ
ಕಾಲ ಉರುಳುವ ಬಗೆ
ಇರುಳ ಕಣ್ಣಿನಾಗಸದಿ
ಕನಸು ನಾವೆಯಾಗಿ ತೇಲುವುದು
ಚುಚ್ಚುವ ಮುಳ್ಳುಗಳ ನಡುವೆ
ಹೂವೊಂದು ಬಿರಿದು ನಗುವುದು
ಮಣ್ಣಿನ ಹೃದಯದಲಿ ಹೀಗೆ
ಬಯಕೆಗಳ ಬೆನ್ನಹತ್ತಿ
ಕುರುಡು ಕುದುರೆಯ ಏರಿ
ದಶದಿಕ್ಕುಗಳಿಗೆ ದಿಕ್ಕೆಟ್ಟು ಓಡಿ
ತಾಕಿ, ತಟ್ಟಲಾದಿತೇನು?
ಸಾರ್ಥಕ ಬದುಕಿನ
ಗಮ್ಯದ ಬಯಲ ಬಾಗಿಲನು
ತಲುಪಲಾದಿತು ಹೇಗೆ?
Comments 2
ಸರಳಾ ಚಂದ್ರಶೇಖರ ಸಾಲೀಮಠ
Sep 27, 2025ಸರ್, ನಿಮ್ಮ ಕಲ್ಪನೆಯ- ‘ಎಲೆ ಉದುರಿದ ಹಾಗೆ, ಕಾಲ ಉರುಳುವ ಬಗೆ’ ಸಾಲು👌👌
ಜಿ. ಶಿವಬಸವ
Oct 2, 2025ಗಮ್ಯದ ಬಯಲ ಬಾಗಿಲನು
ತಲುಪಲಾದಿತು ಹೇಗೆ?- ಗಮ್ಯ ಸೇರುವ, ಸೇರಲಾಗದ ತಳಮಳ.