Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣಿನ ಹೃದಯದಲಿ
Share:
Poems September 13, 2025 ಜಬೀವುಲ್ಲಾ ಎಂ.ಅಸದ್

ಮಣ್ಣಿನ ಹೃದಯದಲಿ

ಅಳಿದ ಮೇಲೆ ಉಳಿಯುವುದೇನು?
ಕೇವಲ ಕುರುಹು ಅಷ್ಟೇ!
ಗಾಳಿ ಬೀಸಿದಾಗ
ಎಲೆ ಉದುರಿದ ಹಾಗೇ
ಕಾಲ ಉರುಳುವ ಬಗೆ

ಇರುಳ ಕಣ್ಣಿನಾಗಸದಿ
ಕನಸು ನಾವೆಯಾಗಿ ತೇಲುವುದು
ಚುಚ್ಚುವ ಮುಳ್ಳುಗಳ ನಡುವೆ
ಹೂವೊಂದು ಬಿರಿದು ನಗುವುದು
ಮಣ್ಣಿನ ಹೃದಯದಲಿ ಹೀಗೆ

ಬಯಕೆಗಳ ಬೆನ್ನಹತ್ತಿ
ಕುರುಡು ಕುದುರೆಯ ಏರಿ
ದಶದಿಕ್ಕುಗಳಿಗೆ ದಿಕ್ಕೆಟ್ಟು ಓಡಿ
ತಾಕಿ, ತಟ್ಟಲಾದಿತೇನು?
ಸಾರ್ಥಕ ಬದುಕಿನ
ಗಮ್ಯದ ಬಯಲ ಬಾಗಿಲನು
ತಲುಪಲಾದಿತು ಹೇಗೆ?

Previous post ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
Next post ನಾನು  ಬಿಂಬ
ನಾನು ಬಿಂಬ

Related Posts

ಗಾಳಿ ಬುರುಡೆ
Share:
Poems

ಗಾಳಿ ಬುರುಡೆ

June 17, 2020 ಪದ್ಮಾಲಯ ನಾಗರಾಜ್
ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು ಗಾಳಿಗೆ ತೂರ್ಹೋಗಬೇಡಾ //ನಂಬಿ// ಚಿತ್ರಾ...
ನೋಟದ ಕೂಟ…
Share:
Poems

ನೋಟದ ಕೂಟ…

May 10, 2023 ಕೆ.ಆರ್ ಮಂಗಳಾ
ಕಾಣುವುದೇ ಒಂದು ನೋಟ ಹೇಳುವುದೇ ಬೇರೊಂದು ಉಸಿರ ಘಮಲಲಿ ಇಲ್ಲಾ ಹಿಡಿದ ವಾಸನೆಯ ಕುರುಹು ಕಿವಿಗೆ ಬಿದ್ದ ಶಬ್ದಕೂ ಕೇಳಿಸಿಕೊಂಡುದಕೂ ಕಾಣಲಿಲ್ಲ ಸಾಮ್ಯತೆ ನಾಲಿಗೆ ರುಚಿಸಿದ್ದಕ್ಕೂ...

Comments 2

  1. ಸರಳಾ ಚಂದ್ರಶೇಖರ ಸಾಲೀಮಠ
    Sep 27, 2025 Reply

    ಸರ್, ನಿಮ್ಮ ಕಲ್ಪನೆಯ- ‘ಎಲೆ ಉದುರಿದ ಹಾಗೆ, ಕಾಲ ಉರುಳುವ ಬಗೆ’ ಸಾಲು👌👌

  2. ಜಿ. ಶಿವಬಸವ
    Oct 2, 2025 Reply

    ಗಮ್ಯದ ಬಯಲ ಬಾಗಿಲನು
    ತಲುಪಲಾದಿತು ಹೇಗೆ?- ಗಮ್ಯ ಸೇರುವ, ಸೇರಲಾಗದ ತಳಮಳ.

Leave a Reply to ಜಿ. ಶಿವಬಸವ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಗೇಣು ದಾರಿ
ಗೇಣು ದಾರಿ
July 10, 2023
ವಚನ – ಚಿಂತನ
ವಚನ – ಚಿಂತನ
October 10, 2023
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
ಅನಿಮಿಷಯೋಗದಲ್ಲೇ ಲೀನವಾಯ್ತು ನಿಶ್ಚಿಂತತೆ
January 15, 2026
Copyright © 2026 Bayalu