Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕಿನ ಹುಳು
Share:
Poems December 9, 2025 ಜ್ಯೋತಿಲಿಂಗಪ್ಪ

ಬೆಳಕಿನ ಹುಳು

ನನ್ನೀ
ಮದವ ಸುಡಲು
ಬರುವ ಬೆಳಕಿನ ಹುಳು
ಹಗಲು ದೃಷ್ಟಿ ಮರೆ
ಇರುಳು ಕಣ್ಣ ಮರೆ

ಕತ್ತಲಲಿ ಮಿನುಗುವುದು

ಏ ಕಣ್ಣೇ
ದೃಷ್ಟಿಯ ಮರೆ ಮಾಡದಿರು

ಇದು
ಬರಿಯೆ ಹುಳು ಅಲ್ಲಾ
ಬೆಳಕಿನ ಹುಳು
ಕಲ್ಯಾಣಕೂ ಹೆಗ್ಗಳಿಕೆ ಇಲ್ಲದೆ
ಕತ್ತಲು ಆರಿಸಿದ ಬೆಳಕಿನ ಹುಳು
ಮಂಟೇದ ಅಲ್ಲಮಪ್ರಭು
ಸ್ವಾಮಿಯ ಕುರುಹುವಿನಲಿ
ಮನದ ಮರೆಯ ಮರಹುವ
ಮಬ್ಬಾಗಿಸಿದ ಘನ ಬೆಳಕು ಈ
ಹುಳು
ಕಲ್ಯಾಣದ ಮಹಾ ಬೆಳಗು

ಈ
ಹುಳುವಿಗಾವ ಭೇದವೋ
ನೆಲ ಒಂದೇ ಜಲ ಒಂದೇ
ದೀಪ ಹೊತ್ತ ದೀಪ ಸ್ತಂಭದ ಮೇಲೆ
ಉರಿಯುವ ಈ ದೀಪಕೆ
ಸ್ತಂಭದ ಹಂಗೇ…

ಹಂಗು ಒಂದೇ ಲೋಕ ಕಲ್ಯಾಣ.

Previous post ಗ್ರಹಣ
ಗ್ರಹಣ

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ಹುಚ್ಚು ಖೋಡಿ ಮನಸು
Share:
Poems

ಹುಚ್ಚು ಖೋಡಿ ಮನಸು

August 6, 2022 ಕೆ.ಆರ್ ಮಂಗಳಾ
ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...

Comments 1

  1. ವಿಜಯಾ ಸರಟೂರು
    Dec 15, 2025 Reply

    ಕಲ್ಯಾಣದ ಶರಣರು ಕಡುಗತ್ತಲಿನಲ್ಲಿ ಬೆಳಕಿನ ಹುಳು, ಹಗಲಿನಲ್ಲಿ ಸೂರ್ಯ.

Leave a Reply to ವಿಜಯಾ ಸರಟೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಈ ಬಳ್ಳಿ…
ಈ ಬಳ್ಳಿ…
October 21, 2024
ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
October 21, 2024
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
Copyright © 2026 Bayalu