ಬೆಳಕಿನ ಹುಳು
ನನ್ನೀ
ಮದವ ಸುಡಲು
ಬರುವ ಬೆಳಕಿನ ಹುಳು
ಹಗಲು ದೃಷ್ಟಿ ಮರೆ
ಇರುಳು ಕಣ್ಣ ಮರೆ
ಕತ್ತಲಲಿ ಮಿನುಗುವುದು
ಏ ಕಣ್ಣೇ
ದೃಷ್ಟಿಯ ಮರೆ ಮಾಡದಿರು
ಇದು
ಬರಿಯೆ ಹುಳು ಅಲ್ಲಾ
ಬೆಳಕಿನ ಹುಳು
ಕಲ್ಯಾಣಕೂ ಹೆಗ್ಗಳಿಕೆ ಇಲ್ಲದೆ
ಕತ್ತಲು ಆರಿಸಿದ ಬೆಳಕಿನ ಹುಳು
ಮಂಟೇದ ಅಲ್ಲಮಪ್ರಭು
ಸ್ವಾಮಿಯ ಕುರುಹುವಿನಲಿ
ಮನದ ಮರೆಯ ಮರಹುವ
ಮಬ್ಬಾಗಿಸಿದ ಘನ ಬೆಳಕು ಈ
ಹುಳು
ಕಲ್ಯಾಣದ ಮಹಾ ಬೆಳಗು
ಈ
ಹುಳುವಿಗಾವ ಭೇದವೋ
ನೆಲ ಒಂದೇ ಜಲ ಒಂದೇ
ದೀಪ ಹೊತ್ತ ದೀಪ ಸ್ತಂಭದ ಮೇಲೆ
ಉರಿಯುವ ಈ ದೀಪಕೆ
ಸ್ತಂಭದ ಹಂಗೇ…
ಹಂಗು ಒಂದೇ ಲೋಕ ಕಲ್ಯಾಣ.



