Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕಲಿ ದೀಪ
Share:
Poems December 8, 2021 ಜ್ಯೋತಿಲಿಂಗಪ್ಪ

ಬೆಳಕಲಿ ದೀಪ

ಅಕಾಲ; ಹಗಲು ಕನಸು
ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು
ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ..

ಈ ಜ್ಞಾನದ ಕೇಡು ನನಗೆ
ಕಣ್ಣಲ್ಲಿ ಕತ್ತಲಿರಿಸಿದೆ
ಬೆಳಕಲಿ ದೀಪ ಹಚ್ಚಿದೆ
ಅಕಾಯ ಅಮಲು ಬಯಲ ತೋರದು

ಬೆಳಕು ತಾಗಿದ ಬತ್ತಿ
ಬೆಳಗದೆ ಸುಟ್ಟಿತ್ತು

ಕಾಣದ್ದೆಲ್ಲವ ಅರಸಿ ಬಳಲಿತ್ತು ಕಣ್ಣು

ಅನ್ಯವ ನೋಡುವ ಕಣ್ಣು
ನುಡಿವ ನಾಲಿಗೆ ತನ್ನ ನೋಡದು ನುಡಿಯದು.

Previous post ನಾನು ಯಾರು?
ನಾನು ಯಾರು?
Next post ಅಂದು-ಇಂದು
ಅಂದು-ಇಂದು

Related Posts

ಹುಲಿ ಸವಾರಿ…
Share:
Poems

ಹುಲಿ ಸವಾರಿ…

June 10, 2023 ಜ್ಯೋತಿಲಿಂಗಪ್ಪ
ಖಾಲೀ… ಇರುವೆಯಲ್ಲಾ ಏನಾದರೂ ನೋಡು ಕಣ್ಣು ತುಂಬಿದೆ ನೋಡಲೇನುಂಟು ನೋಡದು ಏನಾದರೂ ಕೇಳು ಕಿವಿ ತುಂಬಿದೆ ಕೇಳಲೇನುಂಟು ಕೇಳದು ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ...
ಒಂದು ತೊಟ್ಟು ಬೆಳಕು
Share:
Poems

ಒಂದು ತೊಟ್ಟು ಬೆಳಕು

February 7, 2021 ಜ್ಯೋತಿಲಿಂಗಪ್ಪ
ಈ ಕತ್ತಲು ಒಂದು ತೊಟ್ಟು ಬೆಳಕು ಕುಡಿಯಿತು ಅಮಲೇರಿದೆ ಗಾಳಿ ಪಾಲು ಮುಂದಣ ಗೆರೆ ಹಿಂದಕೂ ತಾಗಿದೆ ಪರಿಧಿಯ ಬಿಂದು ತನ್ನ ಇಚ್ಛೆಯನರಿಯದು ಸುತ್ತುವುದು ಬಯಲು ಎಂಬುದೇನು ಬಯಲು ಏನೂ...

Comments 1

  1. Rajashekhar N
    Dec 14, 2021 Reply

    ಸರ್, ನಿಮ್ಮ ಕವನಗಳನ್ನು ಓದುತ್ತಿರುತ್ತೇನೆ. ಬೆಡಗಿನ ವಚನದ ಶೈಲಿ ನಿಮಗೆ ಅಳವಟ್ಟಿದೆ. ಪ್ರತಿಮೆಗಳು ಅಪರೂಪದ್ದಾಗಿರುತ್ತವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
ನೆಲದ ನಿಧಾನ
ನೆಲದ ನಿಧಾನ
April 29, 2018
ಒಳಗಣ ಮರ
ಒಳಗಣ ಮರ
March 12, 2022
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…
November 9, 2021
Copyright © 2026 Bayalu