
ಪ್ರೇಮ ಮತ್ತು ದ್ವೇಷ
ಹಾರುವುದಾದರೂ
ಎಲ್ಲಿಗೆ?
ರೆಕ್ಕೆ ಇಲ್ಲದ ಹಕ್ಕಿಗಳು
ಹೇಗೆ?
ಗಾಳಿ ಹಾರಿಸುವುದಿಲ್ಲ
ನೆಲ ನಡೆಸುವುದಿಲ್ಲ
ಜಲ ಈಜಿಸುವುದಿಲ್ಲ
ಕಲಿಯಬೇಕು
ತಂತಾನೆ ಎಲ್ಲಾ
ಹಾಗೂ
ಪ್ರೀತಿಸುವುದನ್ನು
ಸಹ
ಆಗ
ಹಾರಬಹುದು
ನಡೆಯಬಹುದು
ಈಜಬಹುದು
ಅಂತೆಯೇ
ಪ್ರೀತಿಸಲೂಬಹುದು
ಅರಳಿ ನಗುವ
ಹೂವನ್ನು ಕಾಣಿ
ಖುಷಿ ಪಡಿ
ದೇವರ
ನಾರಿಯ
ಗೋರಿಯ
ಇಲ್ಲದ ಕಾರಣ ನೀಡಿ
ಕಿತ್ತು ಅದನು
ಕೊಲ್ಲದಿರಿ
ದ್ವೇಷ ನೀಡದು
ಏನನು…
Comments 1
ದೇವರಾಜು ಚನ್ನಪಟ್ಟಣ
Aug 2, 2025ದ್ವೇಷಕ್ಕೆ ಪ್ರೀತಿಯೇ ಮದ್ದು. ಆದರೆ ಸೇಡಿಗೆ ಸೇಡನ್ನು ಮೆಚ್ಚುವಂತೆ ನಮ್ಮ ಕಲಾ,ಸಂಸ್ಕೃತಿಗಳು ವಿಭಿನ್ನ ದಾರಿಯಲ್ಲಿ ಹೊರಟಿವ.