Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು  ಬಿಂಬ
Share:
Poems September 13, 2025 ಜ್ಯೋತಿಲಿಂಗಪ್ಪ

ನಾನು ಬಿಂಬ

ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು.
-ಅಲ್ಲಮ

ಈ
ಕನ್ನಡಿಯಲಿ
ಕಾಣುವ ನನ ಬಿಂಬವ
ಓಡಿಸುವುದು ಹೇಗೆ…??!!

ಕಣ್ಣ ಮುಚ್ಚಿದರೆ ಕನ್ನಡಿ ದೂರ
ಕಣ್ಣ ತೆರೆದರೆ ನಾನು ಅದೂರ

ನಾನು ಬಿಂಬ ಬಿಂಬ ನಾನು
ಎರಡರಲಿ ಒಂದ ಕೊಲಲಾಗದು

ನಾನು
ಇದ್ದಂತೆ ನನ್ನ ಬಿಂಬ
ಹಿಗ್ಗದು ಕುಗ್ಗದು
ಹಿಗ್ಗಿರುವೆ ಹಾಗೇ…
ಕಂಡುದ ಹೇಳದು ಹಾಗೆ..

ನಾನು ಮಾಸಿಯೂ ಮಾಸದು ಬಿಂಬ
ನಾನು ಮಾದರೂ ಮಾದುದೇ..ಬಿಂಬ

ಏಸು ಬಿಂಬಗಳೋ….
ಎನ್ನೊಳಗಿಲ್ಲ ಒಂದೂ ಒಂದು
ಬಂದವು ಹೋದವು ಸರಳ
ನನ್ನಲ್ಲಿಯೇ ಇಲ್ಲದುದು ಇನ್ನೆಲ್ಲಿ..

ನಿನ್ನೊಳಗೆ ನಾನೋ ..
ನನ್ನೊಳಗೆ ನೀನೋ…
ಈ ತರ್ಕವೆಲ್ಲಾ ಪಕ್ಕಕ್ಕೆ ಇಡು
ಬಿಂಬಕೆ ಮತಿ ಇಲ್ಲ ಗತಿ ಇಲ್ಲ
ಎಂದೆಂದಿಗೂ ಅಹಂಗೆ

ಆಡಿ ಪೊಳ್ಳಾದೆ ನಾನು
ಆಡದೆ ದಿವ್ಯ ಅದು

ನಡೆಯಲು ಇರುವ ದಾರಿ
ಒಂದೇ ಪುರಾತನರ ನಡೆ

ಕನ್ನಡಿಯ ಕುರುಡಾಗಿಸಲಾರೆ

ಎಹಂಗೆ ಇದ್ದಿತ್ತು ಅಹಂಗೆ ಇದ್ದಿತ್ತಾಗಿ ಇದೇನೆಂದರಿಯೆ.
-ಅಲ್ಲಮ

Previous post ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
Next post ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…

Related Posts

ನಾನೊಂದು ನೀರ್ಗುಳ್ಳೆ
Share:
Poems

ನಾನೊಂದು ನೀರ್ಗುಳ್ಳೆ

September 6, 2023 ಕೆ.ಆರ್ ಮಂಗಳಾ
ಕಾಲದ ಊದುಗೊಳವೆಯಲಿ ನಿರಂತರವಾಗಿ ಉಕ್ಕುತಿವೆ ಅನಂತಾನಂತ ನೀರ್ಗುಳ್ಳೆ ಎಲ್ಲಕೂ ಒಂದೇ ಹುಟ್ಟು ಒಂದೇ ಬಗೆಯ ಸಂಯೋಜನೆ ನಾ ಬೇರೆ ನೀ ಬೇರೆ ಅಂವ ಬೇರೆ ಇಂವ ಬೇರೆ ನಾ ಮೇಲು ನೀ ಕೆಳಗೆ...
ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...

Comments 5

  1. ಮರಿಗೌಡ ಮಾಗಡಿ
    Sep 17, 2025 Reply

    ವಿಶೇಷ ವಿನ್ಯಾಸದ ಕವನ. ವಿವಿಧ ಶೈಲಿಯಲ್ಲಿ ನಡೆಸುತ್ತಿರುವ ನಿಮ್ಮ ಕಾವ್ಯ ಪ್ರಯೋಗ ನಿಜಕ್ಕೂ ಕುತೂಹಲ ಹುಟ್ಟಿಸುವಂತಿರುತ್ತವೆ ಸರ್.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 18, 2025 Reply

      ನಿಮ್ಮ ಓದಿಗೆ ಮನ ತುಂಬಿತು

  2. ನರೇಂದ್ರ ಚಿತ್ರದುರ್ಗ
    Sep 23, 2025 Reply

    ಅರಿವಿಗೆ ಬಾರದ ಅನುಭಾವವನ್ನು ನಿಮ್ಮಂತಹ ಕವಿಗಳ ಕವನಗಳಲ್ಲಿ ಹುಡುಕುವುದು ಎಂತಹ ವಿಪರ್ಯಾಸ ಎನ್ನುವಿರಾ? ವಚನಗಳಲ್ಲಿ ಅಡಗಿರುವ ಅಮೂಲ್ಯ ಅನುಭಾವವನ್ನು ಹೊರತೆಗೆದು ತೋರುವ ಪ್ರಯತ್ನ ಮತ್ತೆ ಅಲ್ಲೇ ಅಡಗಿಬಿಡುತ್ತದೆ.

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Sep 25, 2025 Reply

      ಓದಿಗೆ ಸಂತಸ

      ದಾಟಲುಂಟೇ ಬಯಲ…??!!

  3. ಗಿರೀಶ್ ಜಾಗಿರದಾರ್
    Oct 2, 2025 Reply

    ಬಿಂಬ ತರ್ಕಗಳಾಚಿನದು. ‘ಬಿಂಬಕೆ ಮತಿ ಇಲ್ಲ ಗತಿ ಇಲ್ಲ’. ಇರುವುದೆಲ್ಲಾ ನನಗೆ, ಕೇವಲ ನನಗೆ!!!

Leave a Reply to ಮರಿಗೌಡ ಮಾಗಡಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಬಯಲು ಮತ್ತು ಆವರಣ
ಬಯಲು ಮತ್ತು ಆವರಣ
March 6, 2024
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ನಿನ್ನೆ-ಇಂದು
ನಿನ್ನೆ-ಇಂದು
May 10, 2022
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
Copyright © 2025 Bayalu