Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುದಿಗಳೆರಡು ಇಲ್ಲವಾದಾಗ…
Share:
Poems March 9, 2023 ಕೆ.ಆರ್ ಮಂಗಳಾ

ತುದಿಗಳೆರಡು ಇಲ್ಲವಾದಾಗ…

ಭೂಮಿ- ಆಕಾಶದ ದೂರ ಅಳಿದಾಗ
ಭುವಿಯ ಸೆಳೆತವೂ ಇಲ್ಲ
ಆಗಸದ ಎಳೆತವೂ ಇಲ್ಲ.

ಹಗಲು- ರಾತ್ರಿಗಳ ಭ್ರಮಣ ಸರಿದಾಗ
ಬೆಳಗಿನ ಬಯಕೆಯೂ ಇಲ್ಲ
ಕತ್ತಲೆಯ ಭಯವೂ ಇಲ್ಲ.

ಧರ್ಮ- ಅಧರ್ಮಗಳ ವಾದಗಳು ಸೋತಾಗ
ಧರ್ಮಾಂಧತೆಯೂ ಇಲ್ಲ
ಅಧರ್ಮದ ಜಂಜಡವೂ ಇಲ್ಲ.

ಪಾಪ- ಪುಣ್ಯಗಳ ಗುಟ್ಟು ಬಿಚ್ಚಿದಾಗ
ನರಕ ಭೀತಿಯೂ ಇಲ್ಲ
ಸ್ವರ್ಗದ ಆಸೆಯೂ ಇಲ್ಲ.

ದ್ವೈತ- ಅದ್ವೈತಗಳ ಮೇಲಾಟ ನಿಂತಾಗ
ಎರಡೆಂಬ ಭಿನ್ನತೆ ಇಲ್ಲ
ಬ್ರಹ್ಮ ನಾನೆಂಬ ಧಾಷ್ಟ್ಯವೂ ಇಲ್ಲ.

ಸಾಕಾರ- ನಿರಾಕಾರಗಳ ಗೊಂದಲ ಬಿಟ್ಟಾಗ
ಮೂರ್ತಿಗಳ ಹಂಗೂ ಇಲ್ಲ
ಕಾಣದುದರ ಕಲ್ಪನೆಯೂ ಇಲ್ಲ.

ರೂಪ- ವಿರೂಪಗಳ ದಿಟ್ಟಿಸಿ ಕಂಡಾಗ
ಸೌಂದರ್ಯದ ಬಣ್ಣನೆಯೂ ಇಲ್ಲ
ಕುರೂಪದ ಹೇವರಿಕೆಯೂ ಇಲ್ಲ.

ಸೋಲು- ಗೆಲುವುಗಳ ಒಳಹೊಕ್ಕು ಬಂದಾಗ
ಬೀಳುವ ಭಯವೂ ಇಲ್ಲ
ಬೀಗುವ ಭ್ರಮೆಯೂ ಇಲ್ಲ.

ಸುಖ- ದುಃಖಗಳ ಸುಳಿಯ ತೆಗೆದಾಗ
ಹಿತದ ಮೈಮರೆವಿಕೆ ಇಲ್ಲ
ತಲ್ಲಣದ ದುಗುಡವೂ ಇಲ್ಲ.

ಜ್ಞಾನ- ಅಜ್ಞಾನದ ಜಾಡ ತಿಳಿದಾಗ
ನಾ ಬಲ್ಲೆನೆಂಬ ಕೋಡೂ ಇಲ್ಲ
ಅರಿಯೆನೆಂಬ ಅಳುಕೂ ಇಲ್ಲ.

ಶ್ರೇಷ್ಠ- ಕನಿಷ್ಠತೆಯ ಹುಸಿಯನರಿತಾಗ
ಹಿರಿದೆಂಬ ಹೊಗಳಿಕೆ ಇಲ್ಲ
ಕಿರಿದೆಂಬ ತಾತ್ಸಾರವಿಲ್ಲ.

ಇದೆ- ಇಲ್ಲಗಳ ಹೊಯ್ದಾಟ ಮರೆಯಾದಾಗ
ಇರುವುದರ ಗುಂಗೂ ಇಲ್ಲ
ಇಲ್ಲದುದರ ಗುಲ್ಲೂ ಇಲ್ಲ.

ಬೇಕು- ಬೇಡಗಳ ಆಯ್ಕೆಗಳು ಸರಿದಾಗ
ಇನ್ನೇನಿದೆ ಹಾತೊರೆವುದಕೆ?
ಬೇಡೆಂದು ಬೇಸರಿಸುವುದಕೆ?

ತಾನು- ಎದಿರು ಎನುವ ಮಾಯೆ ಹರಿದಾಗ
ನಾನೆನ್ನುವ ಅಹಮಿಕೆ ಎಲ್ಲಿದೆ?
ನೀನೆನುವ ಬೇಧವಾದರೂ ಎಲ್ಲಿ?

Previous post ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
Next post ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ

Related Posts

ದಾರಿ ಬಿಡಿ…
Share:
Poems

ದಾರಿ ಬಿಡಿ…

December 6, 2020 ಕೆ.ಆರ್ ಮಂಗಳಾ
ದಾರಿ ಬಿಡಿ ದಾರಿ ಬಿಡಿ ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ ನೆನಪುಗಳೇ ಜಗ್ಗದಿರಿ ಹಿಂದಕ್ಕೆ ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ ಕಳೆದ ಕಾಲಗಳಿಗೆಳೆದು ಸಮಯ...
ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...

Comments 3

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Mar 11, 2023 Reply

    ನಿಜ..ಎರಡರ ಹಂಗು ತೊರೆದರೆ ಏನೂ ಉಳಿಯದು.ಸರಳವಾಗಿ ಹೇಳಿರುವ ಇರಿ.

  2. ಸುನಂದಾ ರಾಚಣ್ಣ, ದಾವಣಗೆರೆ
    Mar 12, 2023 Reply

    ತುದಿಗಳೆರಡು ಇಲ್ಲವಾದಾಗ ಏನು ಇವೆ, ಏನೂ ಇಲ್ಲ ಎಂದಾಗ, ಇದು ಭ್ರಮೆಯೋ, ಕಲ್ಪನೆಯೋ, ನಿಜವೋ ಸುಳ್ಳೋ ತಿಳಿಯದೇ ತಲೆಕೆರೆದುಕೊಂಡಾಗ ಸಿಕ್ಕಿದ್ದು ಬಯಲು, ಬರೀ ಬಯಲು, ಅಲ್ಲೇನು ಹುಡುಕಲಿ? ಆದಿ, ಅಂತ್ಯ ಎರಡೂ ಇಲ್ಲ, ಬದುಕು ಸಾಗುತಿದೆ, ಜೀವನ ಎಂಥ ವಿಸ್ಮಯ ಅಲ್ಲವೇ?

  3. ಅಂಬಾರಾಯ ಬಿರಾದಾರ
    Mar 14, 2023 Reply

    ತುದಿ ಮೊದಲಿಲ್ಲದ ಘನ ಬಯಲು
    👌👍👌👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಹಾಯ್ಕು
ಹಾಯ್ಕು
September 6, 2023
ಧರೆಗೆ ಸೂತಕವುಂಟೆ?
ಧರೆಗೆ ಸೂತಕವುಂಟೆ?
August 11, 2025
ಕೇಳಿಸಿತೇ?
ಕೇಳಿಸಿತೇ?
April 6, 2024
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಶಿವಯೋಗ
ಶಿವಯೋಗ
July 4, 2021
ಪೊರೆವ ದನಿ…
ಪೊರೆವ ದನಿ…
August 11, 2025
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
Copyright © 2026 Bayalu