Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವಿಗೆ ನಮನ…
Share:
Poems January 8, 2023 ಕೆ.ಆರ್ ಮಂಗಳಾ

ಗುರುವಿಗೆ ನಮನ…

ನೋಟದ ನಂಜನು
ಕೂಟದ ತೊಡಕನು
ಭವದ ಹುಟ್ಟನು
ಹುಟ್ಟಿನ ಗುಟ್ಟನು
ಬಿಡಿಸಲು ಕಲಿಸಿದ ಗುರುವಿಗೆ ನಮನ

ಭಾವದ ಒಳಗನು
ವಿಷಯದ ಹುರುಳನು
ವಿದೇಹದ ಇರುವನು
ತ್ರಿಪುಟಿಯ ತಿರುಳನು
ಹುರಿಯಲು ಕಲಿಸಿದ ಗುರುವಿಗೆ ನಮನ

ಅಜ್ಞಾನದ ಕೊರಗನು
ಜ್ಞಾನದ ಹೊರೆಯನು
ಚಿತ್ತದ ಸುಳಿಯನು
ಅಹಮಿನ ಗತ್ತನು
ಇಳಿಸಲು ಕಲಿಸಿದ ಗುರುವಿಗೆ ನಮನ

ಮಾತಿನ ಬೆಳಗನು
ಮೌನದ ಘನವನು
ನಡೆ-ನುಡಿ ಸಂಗಮ
ಸಮರಸ ಸಿರಿಯನು
ಬಾಳಿಗೆ ಇಳಿಸಿದ ಗುರುವಿಗೆ ನಮನ

ಯೋಗದ ಮರ್ಮವ
ಮನಕೆ ಮುಟ್ಟಿಸಿ
ಲಿಂಗದ ಸಂಗಕೆ
ಪ್ರಾಣವ ತೋರಿಸಿ
ನಾನಾರೆಂದು ಕಾಣಲು ಕೈಗೆ
ಭಕ್ತಿಯ ಬೆಳಕಿತ್ತ ಗುರುವಿಗೆ ನಮನ.

Previous post ಸೂರ್ಯ
ಸೂರ್ಯ
Next post ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…

Related Posts

ದಾರಿ ಬಿಡಿ…
Share:
Poems

ದಾರಿ ಬಿಡಿ…

December 6, 2020 ಕೆ.ಆರ್ ಮಂಗಳಾ
ದಾರಿ ಬಿಡಿ ದಾರಿ ಬಿಡಿ ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ ನೆನಪುಗಳೇ ಜಗ್ಗದಿರಿ ಹಿಂದಕ್ಕೆ ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ ಕಳೆದ ಕಾಲಗಳಿಗೆಳೆದು ಸಮಯ...
ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...

Comments 3

  1. ಪೆರೂರು ಜಾರು, ಉಡುಪಿ
    Jan 16, 2023 Reply

    ನೋಟದ ನಂಜನಿಳಿಸಿದ ಮೇಲೆ
    ಜ್ಞಾನದ ಹೊರೆಯನಿಳಿಸನ್ನಕ್ಕ
    ಭಕ್ತಿಯ ಠಕ್ಕರ ಸಂಗ ಎಚ್ಚರವಕ್ಕ

  2. VIJAYAKUMAR KAMMAR
    Jan 16, 2023 Reply

    ಇದರಾಗ “ಜ್ಞಾನದ ಹೊರೆ” ಯಾಕ ಅಂತ ತಿಳಿಲಿಲ್ಲಾ. 1,3,4 ಹೊಂದೈತಿ. ಇದು ಯಾಕ ಅಂತ ಕುತೂಹಲ ಅಷ್ಟೆ.

  3. VijayalaksHmi s
    Feb 10, 2023 Reply

    Guruvige namana kavithe bahala sogasagide !🙏

Leave a Reply to VijayalaksHmi s Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ಶಾಂತಿ
ಶಾಂತಿ
April 11, 2025
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಪೊರೆವ ದನಿ…
ಪೊರೆವ ದನಿ…
August 11, 2025
ಶಿವಾಚಾರ
ಶಿವಾಚಾರ
April 9, 2021
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
Copyright © 2026 Bayalu