Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದು ತೊಟ್ಟು ಬೆಳಕು
Share:
Poems February 7, 2021 ಜ್ಯೋತಿಲಿಂಗಪ್ಪ

ಒಂದು ತೊಟ್ಟು ಬೆಳಕು

ಈ
ಕತ್ತಲು
ಒಂದು ತೊಟ್ಟು ಬೆಳಕು
ಕುಡಿಯಿತು ಅಮಲೇರಿದೆ
ಗಾಳಿ ಪಾಲು

ಮುಂದಣ ಗೆರೆ ಹಿಂದಕೂ ತಾಗಿದೆ
ಪರಿಧಿಯ ಬಿಂದು ತನ್ನ
ಇಚ್ಛೆಯನರಿಯದು ಸುತ್ತುವುದು

ಬಯಲು ಎಂಬುದೇನು
ಬಯಲು
ಏನೂ ಇಲ್ಲ ಎಲ್ಲವೂ ಇದೆ
ಕತ್ತಲೂ ಬೆಳಕು

ಈ
ಸಂಜೆಯ ನಸು
ಬೆಳಕು ಕತ್ತಲಿಗೆ ಸರಿಯುವುದ
ಕಾಣಬೇಕು ನಾನು
ದೀಪ ಹಚ್ಚದಿರು ಬೆಳಕಿನ ಹೊದಿಕೆ
ಮರೆಯಲಿ ‘ಅದು’ ಇರುವುದು

ದೀಪದ ಬೆಳಕಲಿ ಕತ್ತಲು ಸಾವು

Previous post ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
Next post ಮುಖ- ಮುಖವಾಡ
ಮುಖ- ಮುಖವಾಡ

Related Posts

ಶಾಂತಿ
Share:
Poems

ಶಾಂತಿ

April 11, 2025 Bayalu
ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ, ಸುಮದ ದಳವಾಗು ವನದಲಿ, ಓ ಮನವೇ, ಕಂದನ ಮುಗ್ದ ನಗುವಾಗು.| ೧ | ಹರುಷ ದುಗುಡಗಳ ಮೇಳದಲಿ, ಮಧುರ ನೆನಪುಗಳ ಹೊಳೆಯಾಗು,...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Comments 3

  1. Jayadev Jawali
    Feb 9, 2021 Reply

    ಒಂದು ತೊಟ್ಟು ಬೆಳಕು, ಒಂದು ತೊಟ್ಟು ಕತ್ತಲೆಗೆ ಸಮ ಎಂದು ಎಲ್ಲೋ ಓದಿದ ನೆನಪು. ಬೆಳಕು ಕತ್ತಲೆಯನ್ನು ನುಂಗಬಲ್ಲುದಾದರೆ, ಕತ್ತಲು ಬೆಳಕನ್ನೂ ನುಂಗಬಲ್ಲದು. ಕವನ ಹಲವಾರು ಭಾವಗಳನ್ನು ಮೀಂಟುತ್ತದೆ.

  2. Shivananda G
    Feb 10, 2021 Reply

    ಬೆಳಕಿನ ಹೊದಿಕೆಯ ಮರೆಯಲಿ ಇರುವ ‘ಅದು’ ಬಯಲೇ?!

  3. Padmalaya
    Feb 23, 2021 Reply

    ಅಲ್ಲಮನ ಬಯಲಾಟ…ಬಯಲು ಬಯಲನೆ ಬಿತ್ತಿ ಬಯಲನೆ ಬೆಳೆದ ಬೆಡಗು ಕತ್ತಲ ಬೆಳಕೆರಡನೂ ನುಂಗಬೇಕಿತ್ತಲ್ಲ…..? ಕತ್ತಲ ನುಂಗಿ ಬೆಳಕು ಜಾರಿ ಆಟದಲ್ಲೆ ಅಡಗಿತ್ತಲ್ಲಾ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ದಾಸೋಹ ತತ್ವ
ದಾಸೋಹ ತತ್ವ
January 10, 2021
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
Copyright © 2025 Bayalu