Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಗು ಕನ್ನಡಿಯಂತೆ…
Share:
Poems September 13, 2025 ಕೆ.ಆರ್ ಮಂಗಳಾ

ಆಗು ಕನ್ನಡಿಯಂತೆ…

ಗ್ರಹಿಸು
ಸಂಗ್ರಹಿಸಬೇಡ
ಏನನ್ನೂ…
ಕಂಡದ್ದು ಕೇಳಿದ್ದು
ಮೂಸಿದ್ದು ಮುಟ್ಟಿದ್ದು
ಅನುಭವಿಸಿದ್ದು
ಓದಿದ್ದು ಕೂಡ…

ತೂರಿಹೋಗಲಿ
ಅವಿತ
ವಾಸನೆಗಳೆಲ್ಲಾ
ಮುಗಿಬಿದ್ದು
ಬರುವ
ಯೋಚನೆಗಳೆಲ್ಲಾ
ಹೊಂಚು
ಹಾಕುವ
ಸಂಚಯಗಳೆಲ್ಲಾ…
ಸಂಕಲ್ಪ
ವಿಕಲ್ಪಗಳ
ತೊಳಲಾಟಗಳೆಲ್ಲಾ…

ಮಾತು
ಬಲಿಯದ ಮುನ್ನ
ಮೌನ ತಾಳು
ಮೌನ
ಕರಗುವ ಮುನ್ನ
ಖಾಲಿಯಾಗು…

ಸಹನಳಾಗು
ಭೂಮಿಯಂತೆ
ಸ್ವತಂತ್ರವಾಗಿರು
ಗಾಳಿಯಂತೆ
ಹರಿಯುತಿರು
ನೀರಿನಂತೆ
ಶುದ್ಧವಾಗಿರು
ಬೆಂಕಿಯಂತೆ
ಮುಕ್ತವಾಗಿರು
ಆಗಸದಂತೆ…

ಗುರು-
ಎಲ್ಲ ಹೇಳಿಯೂ
ಹೇಳದ ಗುಟ್ಟು…
ತೋರುವ ಕನ್ನಡಿ
ಕೂಡಿಡದು ಏನನೂ…
ಕನ್ನಡಿಯಾದರಲ್ಲವೆ
ಮನವೆಂಬುದು
ಬೇರಲ್ಲಾ
ಮಹಾದೇವನ ಅರುಹು.

Previous post ನಾನು  ಬಿಂಬ
ನಾನು ಬಿಂಬ
Next post ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ಗುರುವೆಂಬೋ ಬೆಳಗು…
Share:
Poems

ಗುರುವೆಂಬೋ ಬೆಳಗು…

February 6, 2025 ಕೆ.ಆರ್ ಮಂಗಳಾ
ಒಳಗಿರುವುದೆಲ್ಲವೂ ಕೂಡಿಸಿಟ್ಟುಕೊಂಡದ್ದೇ ಬುದ್ಧಿ ಬಲಿತಾಗಿನಿಂದ ಗೊತ್ತಿದ್ದೋ… ಇಲ್ಲದೆಯೋ ನನಗೆ ನೆನಪಿದೆ ಕಂಡದ್ದು ಉಂಡದ್ದು ಮುಟ್ಟಿದ್ದು ಮೂಸಿದ್ದು ತಟ್ಟಿದ್ದು ಸೆಳೆದದ್ದು...

Comments 1

  1. ಸುರೇಶ್ ಪಾಟೀಲ್
    Oct 2, 2025 Reply

    ಅಕ್ಕಾ, ಪದೇಪದೇ ಓದಿಸಿಕೊಳ್ಳುವ ಮಾತುಗಳಿವೆ ನಿಮ್ಮ ಕವನದಲ್ಲಿ, ಬಹಳ ಹಿಡಿಸಿತು. ಅಂತಹ ಗುರು ಸಿಗುವ ಪುಣ್ಯ ಎಲ್ಲರಿಗೂ ಇರುವುದಿಲ್ಲ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಇದ್ದಷ್ಟೇ…
ಇದ್ದಷ್ಟೇ…
January 10, 2021
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ
January 15, 2026
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
September 10, 2022
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಕುರುಹೇ ಬಯಲು
ಕುರುಹೇ ಬಯಲು
February 16, 2026
ಶಿವನ ಕುದುರೆ…
ಶಿವನ ಕುದುರೆ…
May 1, 2019
ಈ ಬಳ್ಳಿ…
ಈ ಬಳ್ಳಿ…
October 21, 2024
Copyright © 2026 Bayalu