Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರ್ಥ – ವ್ಯರ್ಥ
Share:
Poems April 5, 2026 ಜಬೀವುಲ್ಲಾ ಎಂ.ಅಸದ್

ಅರ್ಥ – ವ್ಯರ್ಥ

ಮುಗಿಲಿಗೆ ಜಿಗಿದ ಪಾದ
ಮಸ್ತಕದ ಕಂದಕದಲ್ಲಿ ಚಿಗುರಿ
ಶತಮಾನಗಳ ಮೊಳೆ ಹೊಡೆದ
ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು
ಕಾಲದ ಸಹಿಯಾಗಿ ಬದಲಾಗಿ
ಉಸಿರ ಗೊರಿಯೊಳಗೆ ಬೆರೆತು
ಹೆಜ್ಜೆ ಗುರುತುಗಳಲ್ಲಿ ಕಣ್ಣುಗಳು
ಬುಗುರಿಯಾಗಿ ಗರಗರ ತಿರುಗಿ
ಕುರುಡು ದಾರಿಯ ಅರಸಿ

ನೆರಳಿಗೆ ಬಿದ್ದ ಬೆಂಕಿ
ಯ ಆರಿಸುವ ಯತ್ನದಲಿ
ಆತ್ಮವೂ ಧಘಧಗಿಸಿ ಉರಿದು
ಆವಿಯಾಗಿ ಕರಗಿ
ಅನಂತತೆಯ ಶೂನ್ಯದಲಿ

ಹೊಕ್ಕುಳ ಬಳ್ಳಿ ಸುತ್ತಿದ ನಾಲಿಗೆ
ಚಡಪಡಿಸುತಿದೆ ಒಂದೇ ಸಮನೆ
ದಿಕ್ಕಿಲ್ಲದ ದೃಷ್ಟಿ ಗೋಡೆಗೆ ಬಡಿದು
ನೆಲಕೆ ಬಿದ್ದು ಹೊರಳಾಡಿ
ಅತ್ತು

ಕಂಬನಿಗಳ ಕನ್ನಡಿಯ ಯೋಮದಲ್ಲಿ
ಅಲೆಮಾರಿ ಒಂಟಿ ಹಕ್ಕಿಯ
ಅನಾಥ ಸದ್ದು ಮೊಳಗಿ
ರೆಕ್ಕೆ ಮುರಿದ ನೋವು ಹೂ ಮುಡಿದು
ಮಡಿದ ಹೃದಯದ ಮಣ್ಣಲ್ಲಿ ಹರಿದು
ಅಂತರಂಗದ ಕಣಿವೆಯಲಿ ನದಿಯಾಗಿ ಉಕ್ಕಿ
ಕಾಣದಾಯಿತು ಕಡಲು ಬಿಕ್ಕಿ

ಎಲ್ಲೊ ಬಿದ್ದಿದೆ ಆ ಮುರಿದ ಮರದ ಕಾಲು
ಸೂರ್ಯ ಸಾಯುವ ಈ ಸರಿಹೊತ್ತಲಿ
ಹೊತ್ತಿಸದ ದೀಪದ ನೆರಳನು
ಸುಮ್ಮನೆ ಹುಡುಕದಿರು ನೀನು

ಕತ್ತಲ ಬೀಜದ ಮೊಳಕೆಯ ಮಿಂಚು
ಹೊಂಚು ಹಾಕುತಿದೆ
ಕಟ್ಟಿದ ಅರಿವೆಯ ಬಿಡಿಸಿ
ಅರಿವಿನ ಕಂಗಳ ಮಿಡಿಸಿ
ಕಾಣು, ಕಾಣುವುದೇನು?
ಕಂಡರೆ, ಕಂಡಿಲ್ಲ ನೀನು
ಏನನ್ನೂ…

Previous post ಯುದ್ದವೋ, ಶಾಂತಿಯೋ…
ಯುದ್ದವೋ, ಶಾಂತಿಯೋ…
Next post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...
ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
September 7, 2021
ಭವ ರಾಟಾಳ
ಭವ ರಾಟಾಳ
September 10, 2022
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
February 16, 2026
ಕುರುಹೇ ಬಯಲು
ಕುರುಹೇ ಬಯಲು
February 16, 2026
ಶಬ್ದದೊಳಗಣ ನಿಶ್ಶಬ್ದ…
ಶಬ್ದದೊಳಗಣ ನಿಶ್ಶಬ್ದ…
July 21, 2024
ನಾನು ಯಾರು?
ನಾನು ಯಾರು?
December 8, 2021
ನಾಥರು ಹಾಗೂ ಶರಣರು
ನಾಥರು ಹಾಗೂ ಶರಣರು
February 16, 2026
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
Copyright © 2026 Bayalu