ಹಣತೆ ಸಾಕು
ಬೆಳಕ ನೋಡಲಾಗದ ಕಣ್ಣು
ದೀಪ ಹಚ್ಚಿದರೆ ಕಣ್ಣು ಕತ್ತಲು
ಹಚ್ಚದಿರೆ ಹೃದಯ ಕತ್ತಲು
ದೀಪ ಬೆಳಗಿಸುವ ಕಷ್ಟ
ಕತ್ತಲೆಂಬುದು ಕತ್ತಲಾಗದು
ಬೆಳಕೆಂಬುದು ಬೆಳಕಾಗದು
ಏನೂ ಕೂಡಿಡದೆ
ಕಳೆಯುವುದು ಹೇಗೆ
ಈಗ
ಇರುವ ಸುಳ್ಳೇ ಅರಗಿಸಲಾಗಿಲ್ಲ
ಇನ್ನೇನು ಹೊಸಾ ಸುಳ್ಳು
ಬೆಟ್ಟದ
ತುದಿಯ ಬಂಡೆ
ಬಂಡೆಯ ಮೇಲೆ ನಿಂತಿರುವ
ಹೆಮ್ಮೆ
ಅಲುಗಾಡದೆ ಬಂಡೆ
ನಾನು ಸಾಯದೆ
ಕಾಣುವುದೇ ಬಯಲು
ಮತ್ತೇನೂ ಇಲ್ಲ ಸಾಯಲಿ
ಮುದ್ದಾದ ಮಿಥ್ಯ ಈ ದೇವರು
ಮನ ಮರೆತು
ಅಚಲವಾಗಿ ಹಾಯ್ಕು
ಮರೆತುದು ಏನು
ಈ ಕತ್ತಲು
ಬೆಳಗಿಸಲು ಒಂದು
ಹಣತೆ ಸಾಕು
ದೀಪ ಹಚ್ಚಲು ಗಾಳಿಗೆ
ಹೇಳಿರುವೆ.
Comments 4
ಲಹರಿ ಬೆಂಗಳೂರು
Sep 19, 2024ತಮಂಧ ಘನವ ಓಡಿಸಲು ಹಣತೆ ಸಾಕು. ಬಯಲ ಅರಿಯಲು ‘ನಾನು’ ಸಾಯಲೇ ಬೇಕು… ಕವನ ಅರ್ಥಗರ್ಭಿತ.💥💥
ಸಂತೋಷ ಕುಮಾರ್, ಸಿ
Sep 22, 2024ದೇವರು ಅದ್ಭುತ ಸುಳ್ಳು ಅಂತ ಹೇಳುತ್ತಿದ್ದೆ, ‘ಮುದ್ದಾದ ಮಿಥ್ಯ’ ಅನ್ನೋದು ಇನ್ನೂ ಮುದ್ದಾಗಿದೆ ಸರ್😀
ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
Sep 27, 2024ನಿಮ್ಮ ಓದಿಗಾಗಿ ಧನ್ಯವಾದಗಳು
ಶ್ರೀಶೈಲ ಹಾದಿಮನಿ, ಅಮೆರಿಕ
Oct 3, 2024ತುಂಬಾ ಚೆನ್ನಾಗಿ ರಚಿತವಾದ ಕವನಗಳು. ತಮ್ಮ ನಿರಂತರ ಸೇವೆಗೆ ಧನ್ಯವಾದಗಳು 💐🙏