ಭಾರ
ಕಳೆದು ಹೋದ ದಿನಗಳ ಭಾರ
ಉಳಿಸಿಕೊಂಡ ನೆನಪಿನ ಭಾರ
ಕಾಣದಿರುವ ಕ್ಷಣಗಳ ಭಾರ
ಕಲ್ಪನೆಗಳ ಹೆಣಿಕೆಯ ಭಾರ…
ಹೊರಲಾರೆ ತಂದೆ ಈ ತಲೆಭಾರ
ಹೊತ್ತು ನಡೆಯಲಾರೆ ಮುಂದೆ…
ಹಳಸಿಹೋದ ವಿಷಯದ ಭಾರ
ಅವರಿವರ ಮಾತಿನ ಭಾರ
ಓದಿಕೊಂಡ ತಿಳಿವಿನ ಭಾರ
ನಡೆದುಬಂದ ದಾರಿಯ ಭಾರ
ಹೊರಲಾರೆ ತಂದೆ ಈ ತಲೆಭಾರ
ಹೊತ್ತು ನಡೆಯಲಾರೆ ಮುಂದೆ…
ಮರೆತೆನೆಂದ ದಿನಗಳ ಭಾರ
ಹಂಡ ಹಳಹಳಿಕೆಯ ಭಾರ
ಮನವ ಹೊತ್ತ ದೇಹದ ಭಾರ
ಹೊರೆಯಾಯ್ತು ಬದುಕಿನ ಭಾರ
ಹೊರಲಾರೆ ತಂದೆ ಈ ತಲೆಭಾರ
ಹೊತ್ತು ನಡೆಯಲಾರೆ ಮುಂದೆ…
Comments 2
Devaraj B.S
Oct 10, 2020ಅಕ್ಕಾ, ನಾವು ಈ ಭಾರಗಳನ್ನೆಲ್ಲಾ ಹೊತ್ತುಕೊಂಡಿದ್ದೇವೆ… ಇಳಿಸೋದು ಹೇಗೆ? ನೀವೇ ಉತ್ತರಿಸಬೇಕು
JAGADISH M HOSMATH
Jan 10, 2021Aravey Guru!!