Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಭಾರ
Share:
Poems October 6, 2020 ಕೆ.ಆರ್ ಮಂಗಳಾ

ಭಾರ

ಕಳೆದು ಹೋದ ದಿನಗಳ ಭಾರ
ಉಳಿಸಿಕೊಂಡ ನೆನಪಿನ ಭಾರ
ಕಾಣದಿರುವ ಕ್ಷಣಗಳ ಭಾರ
ಕಲ್ಪನೆಗಳ ಹೆಣಿಕೆಯ ಭಾರ…
ಹೊರಲಾರೆ ತಂದೆ ಈ ತಲೆಭಾರ
ಹೊತ್ತು ನಡೆಯಲಾರೆ ಮುಂದೆ…

ಹಳಸಿಹೋದ ವಿಷಯದ ಭಾರ
ಅವರಿವರ ಮಾತಿನ ಭಾರ
ಓದಿಕೊಂಡ ತಿಳಿವಿನ ಭಾರ
ನಡೆದುಬಂದ ದಾರಿಯ ಭಾರ
ಹೊರಲಾರೆ ತಂದೆ ಈ ತಲೆಭಾರ
ಹೊತ್ತು ನಡೆಯಲಾರೆ ಮುಂದೆ…

ಮರೆತೆನೆಂದ ದಿನಗಳ ಭಾರ
ಹಂಡ ಹಳಹಳಿಕೆಯ ಭಾರ
ಮನವ ಹೊತ್ತ ದೇಹದ ಭಾರ
ಹೊರೆಯಾಯ್ತು ಬದುಕಿನ ಭಾರ
ಹೊರಲಾರೆ ತಂದೆ ಈ ತಲೆಭಾರ
ಹೊತ್ತು ನಡೆಯಲಾರೆ ಮುಂದೆ…

Previous post ನದಿಯನರಸುತ್ತಾ…
ನದಿಯನರಸುತ್ತಾ…
Next post ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…

Related Posts

ಪ್ರೇಮ ಮತ್ತು ದ್ವೇಷ
Share:
Poems

ಪ್ರೇಮ ಮತ್ತು ದ್ವೇಷ

July 10, 2025 ಜಬೀವುಲ್ಲಾ ಎಂ.ಅಸದ್
ಹಾರುವುದಾದರೂ ಎಲ್ಲಿಗೆ? ರೆಕ್ಕೆ ಇಲ್ಲದ ಹಕ್ಕಿಗಳು ಹೇಗೆ? ಗಾಳಿ ಹಾರಿಸುವುದಿಲ್ಲ ನೆಲ ನಡೆಸುವುದಿಲ್ಲ ಜಲ ಈಜಿಸುವುದಿಲ್ಲ ಕಲಿಯಬೇಕು ತಂತಾನೆ ಎಲ್ಲಾ ಹಾಗೂ ಪ್ರೀತಿಸುವುದನ್ನು...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 2

  1. Devaraj B.S
    Oct 10, 2020 Reply

    ಅಕ್ಕಾ, ನಾವು ಈ ಭಾರಗಳನ್ನೆಲ್ಲಾ ಹೊತ್ತುಕೊಂಡಿದ್ದೇವೆ… ಇಳಿಸೋದು ಹೇಗೆ? ನೀವೇ ಉತ್ತರಿಸಬೇಕು

  2. JAGADISH M HOSMATH
    Jan 10, 2021 Reply

    Aravey Guru!!

Leave a Reply to Devaraj B.S Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
January 15, 2026
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಮೀನಿನ ಬಯಕೆ
ಮೀನಿನ ಬಯಕೆ
June 10, 2023
Copyright © 2026 Bayalu