Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕು ಸಿಕ್ಕೀತೆ?
Share:
Poems March 9, 2023 ಜ್ಯೋತಿಲಿಂಗಪ್ಪ

ಬೆಳಕು ಸಿಕ್ಕೀತೆ?

ಈಗ
ನೀನು ಮರೆವು
ನಾನು
ಇರುವೆ ನಾ..

ಹೇಳ
ಬಾರದು ಕೇಳ
ಬಾರದು

ಬಾಳೆ
ಹಣ್ಣಾಗಿ ಈಗಷ್ಟೇ
ಬಾಗಿದೆ

ಏನೇ ಹೇಳಿ
ಕಾಣುವುದೆಲ್ಲಾ ಸತ್ಯವೇ
ಅಲ್ಲಾ
ಏನೂ ಆಗಬಹುದು

ಆಕಾಶ ಮೈದೆರೆದರೆ ಬಯಲು ಕಾಣುವುದು.

*** ***

ಕಣ್ಣಳತೆಗೆ ಸಿಕ್ಕ ಬೆಳಕು
ಕಂಡೆ
ಕಣ್ಣಳತೆಗೆ ಸಿಗದು ಬೆಳಕು
ಕಂಡೆ
ಕಂಡೆ ಕಂಡೆ ಕಣ್ಣಳತೆಯ
ಕಂಡೆ
ಕಣ್ಣ ಒಳಗಣ ಸಿಕ್ಕು
ತಂತಿ ಹರಿದ ತಂಬೂರಿ

ದೃಷ್ಟಿಯ ಮರೆವೆ ಕಣ್ಣಿಗೆ ಕತ್ತಲು
ಕಣ್ಣೇ ಬೆಳಗಿದರೆ ದೃಷ್ಟಿ ಮರೆ.

Previous post ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
Next post ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ಹಾದಿಯ ಹಣತೆ…
Share:
Poems

ಹಾದಿಯ ಹಣತೆ…

June 12, 2025 ಕೆ.ಆರ್ ಮಂಗಳಾ
ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...

Comments 3

  1. Savitha Bannur
    Mar 12, 2023 Reply

    ಆಕಾಶ ಮೈದೆರೆದರೆ ಬಯಲು ಕಾಣಬಹುದು!- ಬೆಡಗಿನ ವಚನದಂತಿರುವ ಕವನದ ಸಾಲು ಗಮನ ಸೆಳೆದು ವಿಚಾರಕ್ಕೆ ಹಚ್ಚುತ್ತದೆ.

  2. ಶಿವಕುಮಾರ್ ಎಲ್
    Mar 12, 2023 Reply

    ಕಾಣುವುದೆಲ್ಲಾ ಸತ್ಯವಲ್ಲಾ ಎನ್ನುತ್ತಾರೆ, ಕಂಡದ್ದೆಲ್ಲಾ ಸುಳ್ಳೆಂದರೆ ಬಾಳುವುದು ಹೇಗೆ? ನಿಜ ಯಾವುದು, ಮಾಯೆ ಯಾವುದು?

  3. ಪೆರೂರು ಜಾರು, ಉಡುಪಿ
    Mar 12, 2023 Reply

    ಆಗಸ ಭೂಮಿ ತುದಿಯಲ್ಲಿ ಒಂದಾದಂತೆ ಕಂಡುದು ಭ್ರಮೆ
    ತುದಿಗಳಿಲ್ಲಾ ಎಂಬ ಅರಿವು ನಿಚ್ಚಳವಾದಾಗ
    ತುದಿ ಎಳೆವವರು ಹೆಚ್ಚಾಗಿ ಹುಚ್ಚು ಬಯಲಾಯ್ತು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ಕುರುಹೇ ಬಯಲು
ಕುರುಹೇ ಬಯಲು
February 16, 2026
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-2
November 7, 2020
ದಾರಿ ಬಿಡಿ…
ದಾರಿ ಬಿಡಿ…
December 6, 2020
ಶಿವಾಚಾರ
ಶಿವಾಚಾರ
April 9, 2021
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
Copyright © 2026 Bayalu