ಬೆಳಕು ಸಿಕ್ಕೀತೆ?
ಈಗ
ನೀನು ಮರೆವು
ನಾನು
ಇರುವೆ ನಾ..
ಹೇಳ
ಬಾರದು ಕೇಳ
ಬಾರದು
ಬಾಳೆ
ಹಣ್ಣಾಗಿ ಈಗಷ್ಟೇ
ಬಾಗಿದೆ
ಏನೇ ಹೇಳಿ
ಕಾಣುವುದೆಲ್ಲಾ ಸತ್ಯವೇ
ಅಲ್ಲಾ
ಏನೂ ಆಗಬಹುದು
ಆಕಾಶ ಮೈದೆರೆದರೆ ಬಯಲು ಕಾಣುವುದು.
*** ***
ಕಣ್ಣಳತೆಗೆ ಸಿಕ್ಕ ಬೆಳಕು
ಕಂಡೆ
ಕಣ್ಣಳತೆಗೆ ಸಿಗದು ಬೆಳಕು
ಕಂಡೆ
ಕಂಡೆ ಕಂಡೆ ಕಣ್ಣಳತೆಯ
ಕಂಡೆ
ಕಣ್ಣ ಒಳಗಣ ಸಿಕ್ಕು
ತಂತಿ ಹರಿದ ತಂಬೂರಿ
ದೃಷ್ಟಿಯ ಮರೆವೆ ಕಣ್ಣಿಗೆ ಕತ್ತಲು
ಕಣ್ಣೇ ಬೆಳಗಿದರೆ ದೃಷ್ಟಿ ಮರೆ.
Comments 3
Savitha Bannur
Mar 12, 2023ಆಕಾಶ ಮೈದೆರೆದರೆ ಬಯಲು ಕಾಣಬಹುದು!- ಬೆಡಗಿನ ವಚನದಂತಿರುವ ಕವನದ ಸಾಲು ಗಮನ ಸೆಳೆದು ವಿಚಾರಕ್ಕೆ ಹಚ್ಚುತ್ತದೆ.
ಶಿವಕುಮಾರ್ ಎಲ್
Mar 12, 2023ಕಾಣುವುದೆಲ್ಲಾ ಸತ್ಯವಲ್ಲಾ ಎನ್ನುತ್ತಾರೆ, ಕಂಡದ್ದೆಲ್ಲಾ ಸುಳ್ಳೆಂದರೆ ಬಾಳುವುದು ಹೇಗೆ? ನಿಜ ಯಾವುದು, ಮಾಯೆ ಯಾವುದು?
ಪೆರೂರು ಜಾರು, ಉಡುಪಿ
Mar 12, 2023ಆಗಸ ಭೂಮಿ ತುದಿಯಲ್ಲಿ ಒಂದಾದಂತೆ ಕಂಡುದು ಭ್ರಮೆ
ತುದಿಗಳಿಲ್ಲಾ ಎಂಬ ಅರಿವು ನಿಚ್ಚಳವಾದಾಗ
ತುದಿ ಎಳೆವವರು ಹೆಚ್ಚಾಗಿ ಹುಚ್ಚು ಬಯಲಾಯ್ತು.