ಬೆಳಕಲಿ ದೀಪ
ಅಕಾಲ; ಹಗಲು ಕನಸು
ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು
ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ..
ಈ ಜ್ಞಾನದ ಕೇಡು ನನಗೆ
ಕಣ್ಣಲ್ಲಿ ಕತ್ತಲಿರಿಸಿದೆ
ಬೆಳಕಲಿ ದೀಪ ಹಚ್ಚಿದೆ
ಅಕಾಯ ಅಮಲು ಬಯಲ ತೋರದು
ಬೆಳಕು ತಾಗಿದ ಬತ್ತಿ
ಬೆಳಗದೆ ಸುಟ್ಟಿತ್ತು
ಕಾಣದ್ದೆಲ್ಲವ ಅರಸಿ ಬಳಲಿತ್ತು ಕಣ್ಣು
ಅನ್ಯವ ನೋಡುವ ಕಣ್ಣು
ನುಡಿವ ನಾಲಿಗೆ ತನ್ನ ನೋಡದು ನುಡಿಯದು.
Comments 1
Rajashekhar N
Dec 14, 2021ಸರ್, ನಿಮ್ಮ ಕವನಗಳನ್ನು ಓದುತ್ತಿರುತ್ತೇನೆ. ಬೆಡಗಿನ ವಚನದ ಶೈಲಿ ನಿಮಗೆ ಅಳವಟ್ಟಿದೆ. ಪ್ರತಿಮೆಗಳು ಅಪರೂಪದ್ದಾಗಿರುತ್ತವೆ.