
ನಾನು… ನನ್ನದು
ಅಪ್ಪ
ತನ್ನೆಲ್ಲಾ ಆಸೆಗಳ
ಸಾಕಿಕೊಂಡೇ ಮಗನ ಬೆಳೆಸಿದ
ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ
ಮಗನ ಸಾಕಿದ
ಅಪ್ಪನ ಸಾವಿನ ನೆರಳು
ಮಗನನು ಮುಟ್ಟದೇ…
ಈ ಕತ್ತಲಲಿ
ಒಬ್ಬನೇ ಹೋಗುವಾಗ
ಹಾಡುತಿರುವೆ ‘ನಾನು ಏಕಾಂಗಿ’
ನನ್ನ
ದನಿ ನನಗೆ ಕೇಳುತಿದೆ
ಕೇಳಿ
ಕೇಳಿ ಈ ಕಿವಿ
ಹಣ್ಣಾಗಿದೆ ನನ್ನ ಮಾತೇ
ನನಗೆ ಕೇಳುತಿಲ್ಲ
ಶಬ್ದವೆಲ್ಲಾ ಈ ಮಳೆಯಲಿ ನೀರಾಗಿದೆ
ನನ್ನದು ಎಂಬುದು ನನ್ನ
ಚೈತನ್ಯ ಇನ್ನುಳಿದುದು ಅನ್ಯ.
Comments 2
Prasad Patil
Jul 6, 2021ನನ್ನ ಮಾತೇ ನನಗೆ ಕೇಳದ ಮೇಲೆ ಆ ದೇಹ ಹಣ್ಣಾಯಿತೆಂದಲ್ಲವೇ? ದೇಹ ಹಣ್ಣಾಗುವುದು….. ಜೀವ? ಚಿಂತನೆಗೊಡ್ಡುವ ಕಾವ್ಯ.
Padmalaya
Jul 7, 2021ಜ್ಯೋತಿಲಿಂಗಪ್ಪ ನವರ ತೀರಾ ಇತ್ತೀಚಿನ ನನಗೆ ಇಷ್ಠವಾದ ಕವನವಿದು.ಕಾವ್ಯಮೀಮಾಂಸೆಯ ಮುಖ್ಯ ಬೇಸಾಯ ಕಾವ್ಯನಿರಸನವೆಂಬುದನ್ನ ಮೇಳೈಸುವ ಸುಂದರ ಹನಿಗವನವಿದು..