ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
ಗೋಡೆ ಎಬ್ಬಿಸಿದವರಾರು
ಪರದೆ ಬಿಟ್ಟವರಾರು?
ಕತ್ತಲು ತುಂಬಿದವರಾರು?
ಮಂಜು ಕವಿಸಿದವರಾರು?
ನಿನ್ನಿಂದ ನನ್ನ ದೂರ ಮಾಡಿದವರಾರು?
ನನ್ನ-ನಿನ್ನ ನಡುವೆ
ಕಂದ ತೋಡಿದವರಾರು
ಕೋಟೆ ಕಟ್ಟಿದವರಾರು
ಗಡಿಯ ಕೊರೆದವರಾರು
ನಿನ್ನಿರುವ ಮರೆವಂತೆ
ಮಂಪರು ಕವಿಸಿದವರಾರು?
ಅರಿವು-ಮರೆವಿನಾಟದಲಿ
ಕಳೆದು ಹೋಯಿತೆ ಕೊಂಡಿ
ಮರೆವು ಮತಿಯನು ನುಂಗಿ
ಅರಿವು ತಿಳಿವನು ನುಂಗಿ
ಅರಸುತ್ತಾ ಅಲೆಯುತ್ತಾ
ಗುರು ಬಾಗಿಲಾ ತಟ್ಟಿ
ಮೊರೆಯಿಟ್ಟಿತು ಜೀವ
ತನ್ನ ತಾ ಕಾಣಲಿಕೆ
ದಾರಿ ತೋರೆಂದು.
Comments 1
Kallappa Banave
Jun 12, 2021ಕವನ ಬಹಳ ಚನ್ನಾಗಿದೆ ಅಕ್ಕಾ, ಯಾವ ಗುರುವಿನ ಕದ ತಟ್ಟಿದಿರಿ ಎಂದು ತಿಳಿಯಬಹುದೇ?