Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ-ನಿನ್ನ ನಡುವೆ
Share:
Poems June 5, 2021 ಕೆ.ಆರ್ ಮಂಗಳಾ

ನನ್ನ-ನಿನ್ನ ನಡುವೆ

ನನ್ನ-ನಿನ್ನ ನಡುವೆ
ಗೋಡೆ ಎಬ್ಬಿಸಿದವರಾರು
ಪರದೆ ಬಿಟ್ಟವರಾರು?
ಕತ್ತಲು ತುಂಬಿದವರಾರು?
ಮಂಜು ಕವಿಸಿದವರಾರು?
ನಿನ್ನಿಂದ ನನ್ನ ದೂರ ಮಾಡಿದವರಾರು?

ನನ್ನ-ನಿನ್ನ ನಡುವೆ
ಕಂದ ತೋಡಿದವರಾರು
ಕೋಟೆ ಕಟ್ಟಿದವರಾರು
ಗಡಿಯ ಕೊರೆದವರಾರು
ನಿನ್ನಿರುವ ಮರೆವಂತೆ
ಮಂಪರು ಕವಿಸಿದವರಾರು?

ಅರಿವು-ಮರೆವಿನಾಟದಲಿ
ಕಳೆದು ಹೋಯಿತೆ ಕೊಂಡಿ
ಮರೆವು ಮತಿಯನು ನುಂಗಿ
ಅರಿವು ತಿಳಿವನು ನುಂಗಿ
ಅರಸುತ್ತಾ ಅಲೆಯುತ್ತಾ
ಗುರು ಬಾಗಿಲಾ ತಟ್ಟಿ
ಮೊರೆಯಿಟ್ಟಿತು ಜೀವ
ತನ್ನ ತಾ ಕಾಣಲಿಕೆ
ದಾರಿ ತೋರೆಂದು.

Previous post ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
Next post ನಾನು… ನನ್ನದು
ನಾನು… ನನ್ನದು

Related Posts

ಸೋತ ಅಂಗೈಗಳಿಗಂಟಿ…
Share:
Poems

ಸೋತ ಅಂಗೈಗಳಿಗಂಟಿ…

October 19, 2025 ಜಬೀವುಲ್ಲಾ ಎಂ.ಅಸದ್
ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ...
ನನ್ನೊಳಗಿನ ನೀನು
Share:
Poems

ನನ್ನೊಳಗಿನ ನೀನು

April 29, 2018 ಕೆ.ಆರ್ ಮಂಗಳಾ
ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...

Comments 1

  1. Kallappa Banave
    Jun 12, 2021 Reply

    ಕವನ ಬಹಳ ಚನ್ನಾಗಿದೆ ಅಕ್ಕಾ, ಯಾವ ಗುರುವಿನ ಕದ ತಟ್ಟಿದಿರಿ ಎಂದು ತಿಳಿಯಬಹುದೇ?

Leave a Reply to Kallappa Banave Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ನಾನೆಂಬುದ ಅಳಿದು…
ನಾನೆಂಬುದ ಅಳಿದು…
April 6, 2023
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ
September 6, 2023
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
Copyright © 2026 Bayalu