
ಕೊನೆಯಿರದ ಚಕ್ರದ ಉರುಳು
ಬೆಳಗು ಕತ್ತಲಿನೊಳಗೊ
ಕತ್ತಲು ಬೆಳಗಿನೊಳಗೊ
ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ
ಎಲ್ಲಾ ಬಯಲಾಗಿ
ಬಯಲೊಳಗೊ…
ಸತ್ಯ ಸುಳ್ಳಿನೊಳಗೊ
ಸುಳ್ಳು ಸತ್ಯದೊಳಗೊ
ಹತ್ತಿ ಉರಿಯುತ್ತಿರೆ ಬಯಕೆ
ನೋವಿನ ಹೊಗೆ ಮೆತ್ತಿ ಆಗಸಕೆ
ಮನದ ಭಿತ್ತಿಯೊಳಗೊ…
ಹುಟ್ಟು ಸಾವಿನೊಳಗೊ
ಸಾವು ಹುಟ್ಟಿನೊಳಗೊ
ಅಳಿದು ಉಳಿವ ರೀತಿ
ಎಲ್ಲಾ ಕಳೆವ ಭೀತಿ
ಕೊನೆಯಿರದ ಚಕ್ರದ ಉರುಳು
ಜಗದ ಬಂಧನದೊಳಗೊ…
Comments 2
ಗೌರಿಶಂಕರ ಎಂ.ಸಿ
Oct 24, 2024ಜಬೀವುಲ್ಲಾ ಅವರ ಕವನ ಚಿಂತನೆಗೆ ಹಚ್ಚುತ್ತದೆ. ಅವರ ಕಾವ್ಯ ಭಾಷೆ 👌👌
Jayadeva Hirekeruru
Nov 1, 2024ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೋ… ಟ್ಯೂನಿನಲ್ಲಿ ಈ ಹಾಡು ಹಾಡಿಕೊಳ್ಳಬಹುದು. ಮನದ ಭಿತ್ತಿಯ ಕಲ್ಪನೆಗಳಿಗೆ ಗರಿ ಹಚ್ಚಿದಂತಿದೆ.