Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕೊನೆಯಿರದ ಚಕ್ರದ ಉರುಳು
Share:
Poems October 21, 2024 ಜಬೀವುಲ್ಲಾ ಎಂ.ಅಸದ್

ಕೊನೆಯಿರದ ಚಕ್ರದ ಉರುಳು

ಬೆಳಗು ಕತ್ತಲಿನೊಳಗೊ
ಕತ್ತಲು ಬೆಳಗಿನೊಳಗೊ
ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ
ಎಲ್ಲಾ ಬಯಲಾಗಿ
ಬಯಲೊಳಗೊ…

ಸತ್ಯ ಸುಳ್ಳಿನೊಳಗೊ
ಸುಳ್ಳು ಸತ್ಯದೊಳಗೊ
ಹತ್ತಿ ಉರಿಯುತ್ತಿರೆ ಬಯಕೆ
ನೋವಿನ ಹೊಗೆ ಮೆತ್ತಿ ಆಗಸಕೆ
ಮನದ ಭಿತ್ತಿಯೊಳಗೊ…

ಹುಟ್ಟು ಸಾವಿನೊಳಗೊ
ಸಾವು ಹುಟ್ಟಿನೊಳಗೊ
ಅಳಿದು ಉಳಿವ ರೀತಿ
ಎಲ್ಲಾ ಕಳೆವ ಭೀತಿ
ಕೊನೆಯಿರದ ಚಕ್ರದ ಉರುಳು
ಜಗದ ಬಂಧನದೊಳಗೊ…

Previous post ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
Next post ಈ ಬಳ್ಳಿ…
ಈ ಬಳ್ಳಿ…

Related Posts

ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...
…ಬಯಲನೆ ಬಿತ್ತಿ
Share:
Poems

…ಬಯಲನೆ ಬಿತ್ತಿ

August 11, 2025 ಜ್ಯೋತಿಲಿಂಗಪ್ಪ
ಅಲ್ಲಿ ನೇತಾಡುವ ಪಟಗಳೆಲ್ಲಾ ನಿನ್ನೆಯವು ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ ಕಣ್ಣೊಳಗಣ ರೂಹು ಕಣ್ಣ ಕೊಲ್ಲದು ಕಂಗಳ ಮರೆಯ ಕತ್ತಲಿಗೆ ಕಂಗಳೇ ಪ್ರಮಾಣ ಪದದ ಅರ್ಥ...

Comments 2

  1. ಗೌರಿಶಂಕರ ಎಂ.ಸಿ
    Oct 24, 2024 Reply

    ಜಬೀವುಲ್ಲಾ ಅವರ ಕವನ ಚಿಂತನೆಗೆ ಹಚ್ಚುತ್ತದೆ. ಅವರ ಕಾವ್ಯ ಭಾಷೆ 👌👌

  2. Jayadeva Hirekeruru
    Nov 1, 2024 Reply

    ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೋ… ಟ್ಯೂನಿನಲ್ಲಿ ಈ ಹಾಡು ಹಾಡಿಕೊಳ್ಳಬಹುದು. ಮನದ ಭಿತ್ತಿಯ ಕಲ್ಪನೆಗಳಿಗೆ ಗರಿ ಹಚ್ಚಿದಂತಿದೆ.

Leave a Reply to ಗೌರಿಶಂಕರ ಎಂ.ಸಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಮಾತು ಮಾಯೆ
ಮಾತು ಮಾಯೆ
July 4, 2021
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
Copyright © 2025 Bayalu