
ಈ ಬಳ್ಳಿ…
ಗಾಳಿ
ಉರಿಸುವುದು ಆರಿಸುವುದು
ದೀಪ
ಬೆಳಗಿಸುವುದು ಯಾರು…?
ನಾನೂ
ಒಂದು ದೀಪ ದ್ವೀಪದ ದಡ
ಕಾಯುತ್ತಾ ಕಾಯುತ್ತಾ
ಅಲೆ
ಎಣಿಸುತಿರುವೆ ಈ
ಸಂಖ್ಯೆ ಮೂರನ್ನು ದಾಟದೇ…
ಈ
ಹಿತ್ತಲ ಗಿಡ
ಹಾಡುತಿರುವ ಹಾಡು ಕೇಳಿ
ಆಸೆ
ಪಡುವುದು ಬಿಟ್ಟೆ
ನೇ…
ಈ
ಬಳ್ಳಿಯೇ ಹಾಗೆ
ಮರ
ತಬ್ಬುವುದು ಇಲ್ಲಾ
ನೆಲಕೆ ಹಬ್ಬುವುದು.
*** *** ***
ನದಿ ಒಣಗಿದೆ ನೀರು ಶುದ್ಧ
ಕಣ್ಣು ಒಣಗಿದೆ ನೋಟ ಶುದ್ಧ
ಕಿವಿ ಒಣಗಿದೆ ಶಬ್ದ ಶುದ್ಧ
ನಾಲಿಗೆ ಒಣಗಿದೆ ರುಚಿ ಶುದ್ಧ
ನಾಸಿಕ ಒಣಗಿದೆ ವಾಸನೆ ಶುದ್ಧ
ತೊಕ್ಕು ಒಣಗಿದೆ ಸ್ಪರ್ಶ ಶುದ್ಧ
ಆಸೆ ಒಣಗಿದೆ ಧ್ಯಾನ ಶುದ್ಧ.
Comments 2
ಬಸವರಾಜ್ ತೋರಣಕಲ್
Oct 24, 2024ಅಮೂರ್ತವಾಗಿ ಸೂಚ್ಯವಾಗಿರುವ ಜ್ಯೋತಿಲಿಂಗಪ್ಪ ಅವರ ಕವನಗಳ ಓದು ಗಾಢ ಅನುಭೂತಿಯನ್ನು ನೀಡುತ್ತವೆ.
Susheela Sagar
Nov 1, 2024ಈ ಬಳ್ಳಿಯ ಮರ ಯಾವುದು? ಅದು ಹಬ್ಬಿ ಹರಡೋದು ಭುವಿಯ ಮಣ್ಣಲ್ಲೇ, ಅತುಕೊಳ್ಳೋದು ಮರದ ಕಾಂಡಕ್ಕೇ!! ತಾತ್ವಿಕ ನೆಲೆಗಟ್ಟಿನ ವಿಚಾರಗಳು ಕವನದಲ್ಲಿ ಮೂಡಿಬಂದ ಪರಿ ಚೆನ್ನಾಗಿದೆ.