ಆಸರೆ
ಅರಿವಿನ
ಮನೆಯ ಮುಂದೆ ನಿಂತು
ಭಿಕ್ಷೆ
ಬೇಡುತಿರುವೆ ನಿಂತು ನೀಡುವರು
ಯಾರು
ಮನೆ ಖಾಲಿ
ಅರಿಯದೆ ಅರಿವು ನಿಲ್ಲದು
ಊರ
ಹೊರಗೆ ನಿಂತು
ಒಳಗೆ
ಹೋಗುವ ದಾರಿ ಕೇಳುತಿರುವೆ
ಹೇಳರು.
ಗಾಳಿಯ ಸದ್ದು
ಮಣ್ಣಿನ ವಾಸನೆ
ನೀರ ನಿನಾದ
ಬಯಲ ಮೋಹ
ಅರಿವಿನ ಕನ್ನಡಿಯಲಿ ಬಿಂಬ
ಊರ ಒಳ ಹೊರಗು
ಬಯಲಿನಲಿ ಏನುಂಟು
ಏನಿಲ್ಲ ಎಲ್ಲವೂ ಖಾಲಿ
ಅಂಗಣ
ಒಳಗೊಂದು ನೀರ ಹೆಜ್ಜೆ.
*** ***
ಈ
ನೆಲದ ಹಾಸಿಗೆ ನನದಲ್ಲ
ಆಗಸದ ಹೊದಿಕೆ ನನದಲ್ಲ
ಹಸಿದು ಉಣ್ಣುವ ಉಣ್ಣೂ ನನದಲ್ಲ
ನನ್ನದೆನ್ನುವುದೇನಿದೆ ನಾನು
‘ನಾನೂ’ ನನದಲ್ಲ
ಈ ‘ಅರಿವು’ ಬಾರದೇ ಇರದು
ಆಸರೆಗೆ ಗೋಡೆ ಮಾಡುಗಳಿಲ್ಲದ
ಬಯಲು ಧರ್ಮ ಇದೆ
ಇರು ಇನ್ನೆರಡು ದಿನ
ತೊಗಲರಿದು ಇಲ್ಲವಾಗುವೆ
ನಾನೇನೆಂದರಿಯುವೆ ಕೊಡಹು ಜೋಳಿಗೆ
ಈಗಷ್ಟೇ ದಾರಿ ಬದಿಯ ಮರಗಳಲಿ
ಚೆರ್ರೀ ಹೂಗಳು ಅರಳಿವೆ
ನೋಡು
ಯಾವ ದಾರಿಯೂ ತೆರೆಯದು.
Comments 1
Vinayak Narasapura
Aug 8, 2022ಅರಿವಿನ ಭಿಕ್ಷೆಯ ಕವನ ಮನಮುಟ್ಟುವಂತಿದೆ. ಕವಿತೆಯ ಹಲವಾರು ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು.