ಆಕಾರ-ನಿರಾಕಾರ
ಇರಯ್ಯಾ
ಕಾಯುವವನೇ ಇರದಿರುವಾಗ
ನಿನಗೇತರ ಅವಸರ
ಕಾಯುತ್ತಾನೆಂದು ಕಾಯುವೆಯಲ್ಲಾ
ಸಾವ ಕಾಯುವ ನ್ಯಾಯ
ಅದಾವುದಯ್ಯಾ ಕೇಡಿಲ್ಲ
ಅಳಿಯೆನೆಂದು ಹಲ್ಲ ಮಸೆಯದಿರು
ಕಾಯ ಕಾಯದು
ಆಕಾರಕೆ ಒಲಿದ ಕಣ್ಣು
ನಿರಾಕಾರಕೆ ಮಣಿಯದೇ
ಬೆಳಕಿಗೆ ಬಾಗದು ನೆರಳು.
* * *
ಈ
ಕಾಣದ ಆದಿ
ಕಂಡರಿಯದ ಅಂತ್ಯ
ಎರಡರ ಮೋಹ ಈ ನಾನು
ಎರಡೂ ತುಂಬಲಾಗದ ಬರಿದು
ಜೇಡ ಜಾಲಕೆ ಅಂಟಿದ ಇಬ್ಬನಿ
ಜೇಡನ ಕೊರಳಿಗೆ ಸುತ್ತಿದ ನೀರ ಮಾಲೆ
ಈ ಕಣ್ಣಾಚೆ ಏನೋ ಇದೆ
ಬೇರಿಲ್ಲದ ಬಯಕೆ ಚಿಗುರು
ಮಗುವೇ ಇಲ್ಲಾ
ಸಿಕ್ಕಾಳೆಯೇ ತಾಯಿ
ನೀರಿನಂತೆ ಹರಿದೂ ಕೂಡುವುದು
ಒಬ್ಬನೇ ಹೋಗುವಾಗ ಮತ್ತೊಬ್ಬ
ಬರುವುದು ಗೊತ್ತಾಗದೇ…
ಎಷ್ಟೊಂದು ಶಬ್ದಗಳು
ಕಿವಿ ಕಿವುಡಾಗಿದೆ
ಈ ಆಕಾರ ಮನೆಗೊಂದುರೂಪು
ನಿಜ ಬಳಸುವುದೆಲ್ಲಾ ನಿರಾಕಾರ
Comments 1
Jayakumar Vijaypur
Jan 13, 2022ಕಾಣದ ಆದಿ, ಕಂಡರಿಯದ ಅಂತ್ಯದ ನಡುವೆ ಆಕಾರ-ನಿರಾಕಾರಗಳ ಜಟಾಪಟಿ!! ಅನುಭಾವಿಕ ನುಡಿಗಳು.