Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಬಳ್ಳಿ…
Share:
Poems October 21, 2024 ಜ್ಯೋತಿಲಿಂಗಪ್ಪ

ಈ ಬಳ್ಳಿ…

ಗಾಳಿ
ಉರಿಸುವುದು ಆರಿಸುವುದು
ದೀಪ
ಬೆಳಗಿಸುವುದು ಯಾರು…?

ನಾನೂ
ಒಂದು ದೀಪ ದ್ವೀಪದ ದಡ
ಕಾಯುತ್ತಾ ಕಾಯುತ್ತಾ
ಅಲೆ
ಎಣಿಸುತಿರುವೆ ಈ
ಸಂಖ್ಯೆ ಮೂರನ್ನು ದಾಟದೇ…

ಈ
ಹಿತ್ತಲ ಗಿಡ
ಹಾಡುತಿರುವ ಹಾಡು ಕೇಳಿ

ಆಸೆ
ಪಡುವುದು ಬಿಟ್ಟೆ
ನೇ…

ಈ
ಬಳ್ಳಿಯೇ ಹಾಗೆ
ಮರ
ತಬ್ಬುವುದು ಇಲ್ಲಾ
ನೆಲಕೆ ಹಬ್ಬುವುದು.

*** *** ***

ನದಿ ಒಣಗಿದೆ ನೀರು ಶುದ್ಧ
ಕಣ್ಣು ಒಣಗಿದೆ ನೋಟ ಶುದ್ಧ
ಕಿವಿ ಒಣಗಿದೆ ಶಬ್ದ ಶುದ್ಧ
ನಾಲಿಗೆ ಒಣಗಿದೆ ರುಚಿ ಶುದ್ಧ
ನಾಸಿಕ ಒಣಗಿದೆ ವಾಸನೆ ಶುದ್ಧ
ತೊಕ್ಕು ಒಣಗಿದೆ ಸ್ಪರ್ಶ ಶುದ್ಧ

ಆಸೆ ಒಣಗಿದೆ ಧ್ಯಾನ ಶುದ್ಧ.

Previous post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
Next post ಎಲ್ಲಿದೆ ಈ ಕ್ಷಣ?
ಎಲ್ಲಿದೆ ಈ ಕ್ಷಣ?

Related Posts

ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...
ಕನ್ನಡಿ ನಂಟು
Share:
Poems

ಕನ್ನಡಿ ನಂಟು

October 10, 2023 ಜ್ಯೋತಿಲಿಂಗಪ್ಪ
ಮಾಳಿಗೆ ಮನೆ ಮನೆಯೊಳಗಣ ಕತ್ತಲಿಗೆ ಬಯಲೊಳಗೊಂದು ಕನ್ನಡಿ ಕಿಲಾಡಿ ಬೆಳಕು ಕಿಂಡಿಯಲಿ ಹರಿದು ಒಳಗು ಎಲ್ಲಾ ಬೆಳಗು ಕಟ್ಟೆಯಲಿ ಕುಳಿತು ಅಜ್ಜಾ ಮೊಮ್ಮಗನ ಈ ಕನ್ನಡೀ ಕಿಲಾ ಡೀ ಆಟಾ...

Comments 2

  1. ಬಸವರಾಜ್ ತೋರಣಕಲ್
    Oct 24, 2024 Reply

    ಅಮೂರ್ತವಾಗಿ ಸೂಚ್ಯವಾಗಿರುವ ಜ್ಯೋತಿಲಿಂಗಪ್ಪ ಅವರ ಕವನಗಳ ಓದು ಗಾಢ ಅನುಭೂತಿಯನ್ನು ನೀಡುತ್ತವೆ.

  2. Susheela Sagar
    Nov 1, 2024 Reply

    ಈ ಬಳ್ಳಿಯ ಮರ ಯಾವುದು? ಅದು ಹಬ್ಬಿ ಹರಡೋದು ಭುವಿಯ ಮಣ್ಣಲ್ಲೇ, ಅತುಕೊಳ್ಳೋದು ಮರದ ಕಾಂಡಕ್ಕೇ!! ತಾತ್ವಿಕ ನೆಲೆಗಟ್ಟಿನ ವಿಚಾರಗಳು ಕವನದಲ್ಲಿ ಮೂಡಿಬಂದ ಪರಿ ಚೆನ್ನಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
  ಅವಿರಳ ಅನುಭಾವಿ-3
  ಅವಿರಳ ಅನುಭಾವಿ-3
May 6, 2020
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
April 6, 2023
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಹಣತೆಯ ಹಂಗು
ಹಣತೆಯ ಹಂಗು
October 19, 2025
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಹಾಯ್ಕುಗಳು
ಹಾಯ್ಕುಗಳು
November 10, 2022
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
Copyright © 2025 Bayalu