Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀನು ನಾನಲ್ಲ…
Share:
Poems July 21, 2024 ಕೆ.ಆರ್ ಮಂಗಳಾ

ನೀನು ನಾನಲ್ಲ…

ಹಿಂದಿನ ಹೆಜ್ಜೆಗಳಲಿ
ತನ್ನನ್ನೇ ಅರಸುವ
ಮುಂದಿನ ದಿನಗಳಲಿ
ತನ್ನನ್ನೇ ಮೆರೆಯಿಸುವ
ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ

ಎಂದೋ ಆದುದನು
ಜತನದಲಿ ಕೂಡಿಟ್ಟು
ಎಲ್ಲವನೂ ಎಲ್ಲರನೂ
ಆ ಅಳತೆಯಲೇ ತೂಗುವ
ತಿಕಲು ಬುದ್ಧಿಯೇ ನೀನು ನಾನಲ್ಲ

ಕಂಗಳಲಿ ಕರುಳಾಗಿ
ರಸದ ದಾಸನಾಗಿ
ವಾಸನೆಯ ಜಾಡಿಗಿಳಿದು
ಸ್ಪರ್ಶಸುಖಕೆ ಬೆನ್ನುಹತ್ತಿ
ಹಿತವಾದುದನೇ ಕೇಳಲೆಳೆಸುವ ನೀನು ನಾನಲ್ಲ

ನೆನಹಿನಲಿ ಅಲೆಯಾಗಿ
ನಡೆಯಲ್ಲಿ ಸೋಗಾಗಿ
ನುಡಿಯಲ್ಲಿ ಕಪಟವಾಗಿ
ಕನಸಿನಲಿ ಬತ್ತಲೆಯಾಗಿ
ಚಿತ್ತದಲಿ ಹೆಪ್ಪುಗಟ್ಟಿದ ನೀನು ನಾನಲ್ಲ

ಆಸೆಗಣ್ಣಾಗಿ ಸುಖಕೆ ಬಾಯಾರಿ
ಸಾಧಿಸುವ ಹುಚ್ಚಾಗಿ
ಕೀರ್ತಿಕಾಮನೆಗೆ ಕಳವಳಿಸಿ
ಗುಪ್ತ ಬಯಕೆಗಳ ದಂಡಾಗಿ
ಒಳಗೊಳಗೆ ಅಂಡಲೆವ ನೀನು ನಾನಲ್ಲ

ಬಿರುಮಾತಿನ ಬಾಣವಾಗಿ
ದೂರುಗಳ ಧಾರೆಯಾಗಿ
ದ್ವೇಷದ ಕೊಂಬಾಗಿ
ಕುದಿವ ಮನವಾಗಿ, ಮೊನಚು ಅಂಬಾಗಿ
ಇದಿರ ಇರಿಯಲು ಕಾಯುವ ನೀನು ನಾನಲ್ಲ

ಮಾತಿಗೆ ಮಾತಾಗಿ
ದ್ವೇಷಕ್ಕೆ ದ್ವೇಷವಾಗಿ
ಕಷ್ಟಗಳಿಗೆ ಕೊಚ್ಚಿಹೋಗಿ
ಬೇಕು ಬೇಡಗಳ ಆಟದಲಿ ಸಿಲುಕಿ
ಕೊರಗಿ ಕಣ್ಣೀರಾಗುವ ನೀನು ನಾನಲ್ಲ

ಮೆಚ್ಚುಗೆಗೆ ಮರುಳಾಗುವ
ಹೊಗಳಿಕೆಗೆ ಹಿರಿಹಿಗ್ಗುವ
ತೆಗಳಿಕೆಗೆ ಮುನಿಸೇಳುವ
ಬೇಕಾದವರ ಅಟ್ಟಕ್ಕೇರಿಸುತಾ
ಬೇಡಾದವರ ನೀಕರಿಸುವ ನೀನು ನಾನಲ್ಲ

ಅಸೂಯೆಯಲಿ ಬೇಯುವ
ಎಡಬಿಡಂಗಿಯಲಿ ತುಯ್ಯುವ
ಆಲಸಕೆ ಮೈಚಾಚುವ
ಜ್ಞಾನಕ್ಕೆ ಮರುಳಾಗುವ
ಚಟಗಳಿಗೆ ಬೆನ್ನು ಬೀಳುವ ನೀನು ನಾನಲ್ಲ.

ಈ ಬಗೆಬಗೆಯ ಹೊಂಡದಲಿ
ಮುಳಿಗೇಳುವ ಮಜದಲಿ
ನಿಜದ ನಾನು ನನಗೆ ಸಿಗಲೇ ಇಲ್ಲ
ಇದೆ-ಇಲ್ಲಗಳ ನಡುವೆ
ಅಲ್ಲದ್ದು ತೂರಿಕೊಂಡು
ಬದುಕು ಲಪಟಾಯಿಸಿದ್ದು ಅರಿವಾಗಲಿಲ್ಲ.

Previous post ಹುಡುಕಾಟ
ಹುಡುಕಾಟ
Next post ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್

Related Posts

ಗುಟುಕು ಆಸೆ…
Share:
Poems

ಗುಟುಕು ಆಸೆ…

May 8, 2024 ಜ್ಯೋತಿಲಿಂಗಪ್ಪ
ಕಣ್ಣ ಮುಂದಣ ಬೆಳಕು ಹಿಂದಣ ನೆರಳು ಕಂಡೂ ಕಾಣವು ಈ ಕಣ್ಣಿಗೆ ನಾಚಿಕೆಯೇ ಸದ್ದು ಕಾಣಲು ಹವಣಿಸುವುದು ಸದ್ದು ಕಾಣುವುದೇ..ಕೇಳಿಸಿಕೋ ಗಗನಕ್ಕೆ ಬಯಲುಂಟೇ ಬಯಲಿಗೆ ಗಗನ ಉಂಟೇ ರಗುತದ...
ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
June 12, 2025
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ನೀರು… ಬರಿ ನೀರೇ?
ನೀರು… ಬರಿ ನೀರೇ?
December 13, 2024
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
Copyright © 2026 Bayalu