Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅಂದು-ಇಂದು
Share:
Poems December 8, 2021 ಕೆ.ಆರ್ ಮಂಗಳಾ

ಅಂದು-ಇಂದು

ಅಂದು-
ಹೇಗೋ ಎಂತೋ
ಸುರುಸುರುಳಿಯಾಗಿ
ಬಗೆಬಗೆಯಲಿ ಪರಿಪರಿಯಲಿ
ಸುತ್ತಿಕೊಂಡಿದ್ದು-
ಮೆತ್ತಿಕೊಂಡಿದ್ದು
ಬೆಳೆಯುತ್ತಾ-ಬಲಿಯುತ್ತಾ
ನಂಟಾಗಿ- ಗಂಟಾಗಿ
ಯಮಯಾತನೆಯ ಹೊರೆಯಾಗಿ
ಮುಡಿಯೇರಿ ಭವಭಾರ
ಉಸಿರ ಹಿಸುಕಿತ್ತು.

ಇಂದು-
ಹೊರೆಗಳನು ಇಳುಹುತ್ತಾ
ಗಂಟುಗಳ ಬಿಡಿಸುತ್ತಾ
ಪೊರೆಗಳನು ಕಳಚುತ್ತಾ
ಹಗುರಾಗಿ ನವಿರಾಗಿ
ಸಾಗುತಿದೆ ನಡಿಗೆ
ಕಾಲದೊಂದಿಗೆ ಚಲನೆ…

ಗುರು ಸಿಕ್ಕು ಬೆಳಕಾಗಿ
ಗಮ್ಯತೆಯ ಅರಿವಾಗಿ
ಕೇಳುವ- ಕೆದಕುವ
ಸಂಚಿ ಬರಿದಾಗಿತ್ತು…
ನಿನ್ನೆ ಕಳೆದ ಮೇಲೆ
ನಾಳೆ ಎಂಬುದೂ ಇಲ್ಲ…
ಮಾತು ಮರೆತಾ ‘ನಾನು’
ಮಾತಿಲ್ಲದಾ ನೀನು
ಸಂಧಿಸುವ ಆ ಗಳಿಗೆ
ಬರಬಾರದೇ ಇಂದೇ?

Previous post ಬೆಳಕಲಿ ದೀಪ
ಬೆಳಕಲಿ ದೀಪ
Next post ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ

Related Posts

ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...
ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಂಟಿನ ನಂಟು
ಗಂಟಿನ ನಂಟು
November 7, 2020
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಪ್ರಕೃತಿಯೊಂದಿಗೆ ಬಾಳಿದವರು…
ಪ್ರಕೃತಿಯೊಂದಿಗೆ ಬಾಳಿದವರು…
June 14, 2024
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
ನದಿಯನರಸುತ್ತಾ…
ನದಿಯನರಸುತ್ತಾ…
October 6, 2020
Copyright © 2025 Bayalu