Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ವರದಿ ಕೊಡಬೇಕಿದೆ
Share:
Poems March 17, 2021 ಕೆ.ಆರ್ ಮಂಗಳಾ

ವರದಿ ಕೊಡಬೇಕಿದೆ

ತನುವ ಭೇದಿಸಿ, ಮನವ ಶೋಧಿಸಿ
ವರದಿ ಕೊಡಲು ಅಟ್ಟಿದ್ದಾನೆ ಗುರು
ನನ್ನೊಳಗೆ ನನ್ನ…

ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ
ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ
ಎಲ್ಲೋ ಓದಿದ್ದನ್ನು, ಯಾರೋ ಹೇಳಿದ್ದನ್ನು
ನಕಲು ಮಾಡಿ ಒಪ್ಪಿಸುವಂತೆಯೂ ಇಲ್ಲ…
ಆಸೆಗಳ ಮೊಗೆತ, ಭಾವಗಳ ರಭಸ
ಕಲ್ಪಿತಗಳ ನೆಗೆತ, ವಿಚಾರಗಳ ಓಟ
ಏನ ಹಿಡಿಯಲಿ, ಎಲ್ಲಿ ಕೆದಕಲಿ?
ಪಾಚಿ ಇದೆ, ಸೆಳೆತ ಇದೆ
ಮರೆವಿನ ಜಾಲಗಳಿವೆ, ಅಪರಿಚಿತ ಜಾಗಗಳಿವೆ
ದಾರಿ ತಪ್ಪಿಸುವ ಕತ್ತಲಿದೆ…

ಹೊರ ಸುದ್ದಿಗಳನು ವರದಿ ಮಾಡಿ
ಅಭ್ಯಾಸವಾದವಳಿಗೆ
ಮನವ ನೋಡುವುದು,
ಅಂತರಂಗದ ಸಮಾಚಾರ ಬರೆವುದು
ಇಷ್ಟು ಸವಾಲಿನದೆಂದು ತಿಳಿದಿರಲೇ ಇಲ್ಲ…
ಕಂಗಾಲಾಗಿ ಕೂರುವಂತಿಲ್ಲ
ಗಡುವು ಮೀರುವಂತಿಲ್ಲ
ಗುರು ಕೊಟ್ಟ ಕಂದೀಲು ಹಿಡಿದು
ಒಳಗಡಿ ಇಟ್ಟಾಗಿದೆ…
ಒಂದೊಂದನೆ ಎತ್ತಿ, ಬಗೆಬಗೆದು ನೋಡಿ
ಹಿಂದು-ಮುಂದಿನ ತಂತುಗಳ ಹುಡುಕಿ
ವರದಿ ಕೊಡಬೇಕಿದೆ ಗುರುವಿಗೆ ವರದಿ ಕೊಡಬೇಕಿದೆ…

Previous post ಬಯಲಾಟ
ಬಯಲಾಟ
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ಮರೆತೆ…
Share:
Poems

ಮರೆತೆ…

July 4, 2022 ಜ್ಯೋತಿಲಿಂಗಪ್ಪ
ಮಗುವಾಗಬೇಕು ನಿಜ ಮರಳದು ಚೈತನ್ಯ ಮರೆತೆ ಹೂಳಲಾಗದು ನೆಳಲು ನಿಜ ನೆಳಲು ಹಿಂಬಾಲಿಸುವುದು ಮರೆತೆ ನೆರಳು ಯಾವಾಗಲೂ ಇರದು ನಿಜ ನೆರಳು ಇರುವಾಗ ಬಿಸಿಲೂ ಇರುವುದು ಮರೆತೆ ಸಮಯ...
ಮೀನಿನ ಬಯಕೆ
Share:
Poems

ಮೀನಿನ ಬಯಕೆ

June 10, 2023 ಡಾ. ಕೆ. ಎಸ್. ಮಲ್ಲೇಶ್
ಒಮ್ಮೆ ಒಂದು ಪುಟ್ಟ ಮೀನು ಈಜಿ ದಡದ ಬಳಿಗೆ ಬಂದು ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು ಬಟ್ಟಲಂತ ಕಣ್ಣ ತೆರೆದು ಪುಟ್ಟ ಮೀನು ನಗೆಯ ಸೂಸಿ ಗೆಳೆಯನಾಗು ನನಗೆ ಎನುತ ಅಂಗಲಾಚಿತು...

Comments 1

  1. Vinay Bengaluru
    Mar 20, 2021 Reply

    ಯಾವ ಗುರುವಿಗೆ ವರದಿ ಕೊಡಬೇಕು ಅಕ್ಕಾ? ಹಾಗೆ ವರದಿ ಕೇಳಿದ ಗುರು ಯಾರು?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
ಕನ್ನಡ ಸಿನೆಮಾದಲ್ಲಿ ವಚನ ಸಂಗೀತ ಮತ್ತು ಮಹಿಳೆಯ ಹೊಸರೂಪ
June 17, 2020
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
September 6, 2023
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
February 6, 2025
Copyright © 2025 Bayalu