Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಂಟಿನ ನಂಟು
Share:
Poems November 7, 2020 ಕೆ.ಆರ್ ಮಂಗಳಾ

ಗಂಟಿನ ನಂಟು

ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ
ನೂಲುವಾಗ ಗೊತ್ತಾಗಲೇ ಇಲ್ಲ
ಎಂಥ ಸಿಕ್ಕುಗಳು ಅಂತೀರಿ!
ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು

ಅಹಮಿಕೆಗೆ ಆಕ್ರೋಶದ ಗಂಟು
ಆಕ್ರೋಶಕೆ ಮದದ ಗಂಟು
ಮದಕೆ ಸೊಕ್ಕಿನ ಗಂಟು
ಸೊಕ್ಕಿಗೆ ತಿರಸ್ಕಾರದ ಗಂಟು
ತಿರಸ್ಕಾರಕ್ಕೆ ಸೇಡಿನ ಗಂಟು
ಸೇಡಿಗೆ ಭಾವದ ಗಂಟು
ಭಾವಕೆ ನಿರೀಕ್ಷೆಯಾ ಗಂಟು
ನಿರೀಕ್ಷೆಗೆ ಪ್ರೇಮದ ಗಂಟು
ಪ್ರೇಮಕೆ ಕಾಮದ ಗಂಟು
ಕಾಮಕ್ಕೆ ಬಯಕೆಯ ಗಂಟು
ಬಯಕೆಗೆ ಆಸೆಯ ಗಂಟು…
ಎಡಕ್ಕೆ ಬಲದ ಗಂಟು
ದ್ವೈತಕ್ಕೆ ಅದ್ವೈತದ ಗಂಟು
ಅಸ್ತಿತ್ವಕೆ ನಾಸ್ತಿತ್ವದ ಗಂಟು
ಮಾತಿಗೆ ಪ್ರತಿಮಾತಿನ ಗಂಟು
ಭಾವಗಳಿಗೆ ನಂಬಿಕೆಯ ಗಂಟು
ನಂಬಿಕೆಗಳಿಗೆ ಅಹಮಿಕೆಯ ಗಂಟು
ನಾನೆಂಬುದಕೆ ನನ್ನದೆಂಬ ಗಂಟು
ಕಾರಣಕ್ಕೆ- ಪ್ರತಿಕಾರಣದ ಗಂಟು…
ಹೀಗೆ ಹಾಕುತ್ತಲೇ ಹೋಗಿದ್ದೇನೆ ಗಂಟಿಗೆ ಗಂಟು

ಈ ಗಂಟುಗಳೇ
ನಡೆವ ದಾರಿಯಲಿ ಮುಳ್ಳಾದವು
ಹೃದಯಗಳ ನಡುವೆ ಬೆಟ್ಟಗಳಾದವು
ಸಂಬಂಧಗಳಲ್ಲಿ ಕಣಿವೆ ಕೊರೆದವು
ಮಾತುಗಳಲ್ಲಿ ವಿಷ ಬಿತ್ತಿದವು
ಗೊಂದಲದಲ್ಲಿ ಮುಳುಗಿಸಿದವು
ಮನದ ತಿಳಿ ಕದಡಿ ಕೊಚ್ಚೆ ಎಬ್ಬಿಸಿದವು…
ಹುಬ್ಬುಗಳ ನಡುವೆ ತೂರಿಕೊಂಡು
ನಗುವ ನುಂಗಿ ಎದೆಯ ಒತ್ತುತ್ತಲೇ ಇದ್ದವು…

ಗುರು ತೋರಿದ ಉಪಾಯದಲಿ
ನೂಲು ಹರಿಯದಂತೆ
ಗಂಟು ಬಿಚ್ಚುವ ಕಲೆ
ಸಿಕ್ಕಾಗದಂತೆ ಎಳೆಯ ನೇಯುವ ಕಲೆ
ಒಂದೊಂದಾಗಿ ತಿಳಿಯತೊಡಗಿತ್ತು
ಕಾರ್ಯ-ಕಾರಣ-ಪರಿಣಾಮಗಳ
ಭವಯಾನದ ಕರ್ಮ ಅರಿವಿಗೆ ನಿಲುಕಿತ್ತು.

Previous post ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
Next post ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ

Related Posts

ವರದಿ ಕೊಡಬೇಕಿದೆ
Share:
Poems

ವರದಿ ಕೊಡಬೇಕಿದೆ

March 17, 2021 ಕೆ.ಆರ್ ಮಂಗಳಾ
ತನುವ ಭೇದಿಸಿ, ಮನವ ಶೋಧಿಸಿ ವರದಿ ಕೊಡಲು ಅಟ್ಟಿದ್ದಾನೆ ಗುರು ನನ್ನೊಳಗೆ ನನ್ನ… ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ ಎಲ್ಲೋ...
ಹುಲಿ ಸವಾರಿ…
Share:
Poems

ಹುಲಿ ಸವಾರಿ…

June 10, 2023 ಜ್ಯೋತಿಲಿಂಗಪ್ಪ
ಖಾಲೀ… ಇರುವೆಯಲ್ಲಾ ಏನಾದರೂ ನೋಡು ಕಣ್ಣು ತುಂಬಿದೆ ನೋಡಲೇನುಂಟು ನೋಡದು ಏನಾದರೂ ಕೇಳು ಕಿವಿ ತುಂಬಿದೆ ಕೇಳಲೇನುಂಟು ಕೇಳದು ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ...

Comments 1

  1. Harsha m patil
    Nov 11, 2020 Reply

    ಗಂಟಿಗೆ ಗಂಟು ಹಾಕುತ್ತಿರುವ ನಮಗೆ ಬದುಕೇ ಗಂಟಾಗಿ ಹೋಗಿದೆ. ರಿಪೇರಿ ಮಾಡಲು ಸಾಧ್ಯವಿಲ್ಲದಂತೆ ಸಂಬಂಧಗಳನ್ನು ಹಾಳುಮಾಡಿಕೊಂಡಿದ್ದೇವೆ….. ಕಣ್ಣಿಗೆ ಕಟ್ಟುವ ಚಿತ್ರಣ ನೀಡುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ನಾನು… ನನ್ನದು
ನಾನು… ನನ್ನದು
July 4, 2021
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಶರಣನಾಗುವುದು…
ಶರಣನಾಗುವುದು…
February 10, 2023
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
Copyright © 2026 Bayalu