Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಲಿ ಸವಾರಿ…
Share:
Poems June 10, 2023 ಜ್ಯೋತಿಲಿಂಗಪ್ಪ

ಹುಲಿ ಸವಾರಿ…

ಖಾಲೀ…
ಇರುವೆಯಲ್ಲಾ ಏನಾದರೂ ನೋಡು
ಕಣ್ಣು ತುಂಬಿದೆ ನೋಡಲೇನುಂಟು ನೋಡದು

ಏನಾದರೂ ಕೇಳು
ಕಿವಿ ತುಂಬಿದೆ ಕೇಳಲೇನುಂಟು ಕೇಳದು

ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ
ತುಳುಕಾಡುತಿವೆ

ಇರು ಇಲ್ಲವಾಗಿರು
ನೆನೆ ನೆನೆದು ನೆನಹು ಅಳಿಯಲಿ

ಹುಲಿ ಸವಾರಿ ಮಾಡಿರುವೆ
ಇಳಿಯುವ ಭಯ
ಭಾವರಹಿತ ಆಗುವುದೆಂದರೆ
ಹುಲಿ ಸವಾರಿಯೇ…

ಹಳೆಯ ಗಾಯ ತಾಗಿ ನೋಯಿಸಿತೇ
ಮಾಯದ ಗಾಯ ನೋವು
ಇದ್ದೇನೋ ಇರೆನೋ….

*** *** ***

ಈ
ಮನವ
ನಿನಗೆ ಕೊಟ್ಟಿರುವೆ ಇನ್ನಾವ
ಮನದಲಿ ಧ್ಯಾನಿಸಲಿ ನಿನ್ನ

ಅಕ್ಕಾ

ನಿನ್ನ ಧ್ಯಾನಿಸುವ ವ್ಯಸನ
ಅಶನ ತೊರೆದಿರುವೆ

ಒಲಿಯುವೆಯೋ
ಒಲಿಯೆಯೋ…

ಆವ ಸಂಬಂಧವೂ ಇಲ್ಲ

ಇನ್ನೇನಿದೆ
ಕಾಯ ಮಣ್ಣಾದಡೆ
ಜೀವ ಬಯಲಾಗದೇ

ಅರಿವೇ
ನೀನಾಗಿರಲು ಇನ್ನಾರ ಕೇಳಲಿ

ಬಯಲಾಗದ ಜೀವಕೆ ಕಾಯ
ಮಣ್ಣಾಗುವುದರಿಯದು

ಈ
ಕಣ್ಣ ಕಾಯದಿಂದ
ಬಿಡಿಸು ಕಾಣುವೆ ನಿನ್ನ

ಕಾಣುವ ಕಣ್ಣಿರಲು ಕಾಯ ಮಣ್ಣು

ಧ್ಯಾನಿಸುವುದೇನು ಒಂದು ವ್ಯಸನವೇ…

ಕತೆಗಾರನಾದರೂ ಕತೆಯಲಿ ಬಾಗಿ.

Previous post ಬಸವತತ್ವ ಸಮ್ಮೇಳನ
ಬಸವತತ್ವ ಸಮ್ಮೇಳನ
Next post ಮೀನಿನ ಬಯಕೆ
ಮೀನಿನ ಬಯಕೆ

Related Posts

ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...

Comments 3

  1. ZABIULLA M. Asad
    Jun 12, 2023 Reply

    ನಮಸ್ತೆ ಸರ್
    ನಿಮ್ಮ ಎರಡೂ ಕವಿತೆಗಳ ಓದಿನೊಂದಿಗೆ ನನ್ನ ಮುಂಜಾವು ಸಂಪನ್ನವಾಯಿತು ಸರ್.
    ಕವಿತೆಗಳ ಅಮೂರ್ತಡೆದೆಗಿನ ಅನುಭಾವದ ನಡಿಗೆ ಆತ್ಮವನ್ನು ತಾಕಿತು. ಗಾಳಿ ಎಲೆಯನ್ನು ಸ್ಪರ್ಶಸಿದ ಹಾಗೆ…
    ಮೇಘಕೆ ಹಕ್ಕಿಯ ರೆಕ್ಕೆ ಮುಟ್ಟಿದ ಹಾಗೆ…

    ಮಣ್ಣು ಮೆಟ್ಟಿದ ದಾರಿ ಕವಿತೆಯನ್ನು ಸಹ ಓದಿದೆ.

    ಧನ್ಯವಾದಗಳು ಸರ್ 🙏🏻💐

  2. ರವಿಕುಮಾರ ಜಗಳೂರು
    Jun 14, 2023 Reply

    ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ… ಬಸವಣ್ಣನವರ ಆಶಯ ನೆನಪಾಯಿತು…

  3. ದಯಾಶಂಕರ ಮಧುಗಿರಿ
    Jun 20, 2023 Reply

    ಕತೆಗಾರನೂ ಕತೆಯಲಿ ಭಾಗಿಯಾದ ಪರಿ, ನನಗೆ ನಾನೊಡ್ಡಿದ ವಿಧಿ!

Leave a Reply to ರವಿಕುಮಾರ ಜಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು: ಬಸವಣ್ಣ
September 4, 2018
ಹುಡುಕಾಟ
ಹುಡುಕಾಟ
July 21, 2024
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
ಅನಿಮಿಷ:5 ಕತ್ತಲೆಂಬೋ ಕತ್ತಲು ಬೆಳಕ ನುಂಗಿತ್ತ…
February 6, 2025
ಲಿಂಗಾಚಾರ
ಲಿಂಗಾಚಾರ
May 6, 2021
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಹಣತೆ ಸಾಕು
ಹಣತೆ ಸಾಕು
September 14, 2024
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
Copyright © 2026 Bayalu