Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಾವಿನ ಅರಿವೆ ಕಳಚಿ!
Share:
Poems September 14, 2024 ಜಬೀವುಲ್ಲಾ ಎಂ.ಅಸದ್

ಸಾವಿನ ಅರಿವೆ ಕಳಚಿ!

ತೆರೆದ ಬೆಂಕಿಯ ಕಣ್ಣಲಿ
ತಾವರೆಯ ಪ್ರತಿಬಿಂಬ
ಕತ್ತಲೆ ಬೆಳಕಿನ ನಡುವಿನ ಯುದ್ಧ
ಮುಗುಳ್ನಕ್ಕ ಬುದ್ಧ!

ಕಟ್ಟಿದ ಸೇತುವೆ ಬಳಸಿದ ಲತೆ
ಚಿಗುರಿದ ಎಲೆಎಲೆಯ ತುಂಬಾ
ಇಬ್ಬನಿಯ ಕಲರವ
ಧ್ಯಾನವಾಯಿತು ಭಂಗ!

ನೀಲಮೆಯ ಈಜಿ
ಮರಳಿದೆ ರೆಕ್ಕೆ ಸಂಕುಲ
ಕಡಲ ದಂಡೆಯಲಿ ಗೂಡು ಕಟ್ಟಿ
ಹುಟ್ಟಿತು ಸ್ಥಾವರ!

ದಿಗಂತದ ಬುಟ್ಟಿಯಲಿ
ಹಣ್ಣಾಗಿ ನೇಸರ
ನಾಳೆಗೆ ಮತ್ತೆ ಹುಟ್ಟುವನು
ಸಾವಿನ ಅರಿವೆ ಕಳಚಿ!

Previous post ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
Next post ಹಣತೆ ಸಾಕು
ಹಣತೆ ಸಾಕು

Related Posts

ನೀನು ನಾನಲ್ಲ…
Share:
Poems

ನೀನು ನಾನಲ್ಲ…

July 21, 2024 ಕೆ.ಆರ್ ಮಂಗಳಾ
ಹಿಂದಿನ ಹೆಜ್ಜೆಗಳಲಿ ತನ್ನನ್ನೇ ಅರಸುವ ಮುಂದಿನ ದಿನಗಳಲಿ ತನ್ನನ್ನೇ ಮೆರೆಯಿಸುವ ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ ಎಂದೋ ಆದುದನು ಜತನದಲಿ ಕೂಡಿಟ್ಟು ಎಲ್ಲವನೂ ಎಲ್ಲರನೂ ಆ...
ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...

Comments 4

  1. ಮಧು ಬಿ.ಎನ್.
    Sep 17, 2024 Reply

    ಜಬೀವುಲ್ಲಾ ರವರ ‘ ಸಾವಿನ ಅರಿವೆ ಕಳಚಿ…’ ಕವಿತೆ ಇತ್ತೀಚೆಗೆ ನಾನು ಆಸ್ವಾದಿಸಿದ ಅತ್ಯುತ್ತಮ ಕವಿತೆ. ಬಳಸಿಕೊಂಡ ರೂಪಕಗಳು ಕೂಡಾ ನವನವೀನ. ಧನ್ಯವಾದಗಳು.

    • Zabiulla M Asad
      Sep 19, 2024 Reply

      ಧನ್ಯವಾದಗಳು ಸರ್ 🙏

  2. ಗಂಗಾಧರ ಜವಳೂರು
    Sep 19, 2024 Reply

    ‘ಕಡಲ ದಂಡೆಯಲಿ ಗೂಡು ಕಟ್ಟಿ
    ಹುಟ್ಟಿತು ಸ್ಥಾವರ!’… ತುಂಬಾ ಚೆನ್ನಾಗಿದೆ ಸರ್.

  3. Harsha, Raichur
    Sep 22, 2024 Reply

    ಕತ್ತಲೆ- ಬೆಳಗಿನ ನಡುವಿನ ಯುದ್ಧದಲ್ಲಿ ಬಿದ್ದವರು ನಾವಲ್ಲವೇ? ಅದಕ್ಕೇ ಬುದ್ಧ ನಕ್ಕಿದ್ದು… ನಮ್ಮ ಮತಿಹೀನತೆಯನ್ನು ಕಂಡು…..

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕೇಳಿಸಿತೇ?
ಕೇಳಿಸಿತೇ?
April 6, 2024
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
ಲಿಂಗಾಯತ ಧರ್ಮದ ಆಕರಗಳು ಮತ್ತು ಗ್ರಂಥಕರ್ತೃಗಳು
August 10, 2023
ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
July 10, 2025
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಈ ಕನ್ನಡಿ
ಈ ಕನ್ನಡಿ
March 6, 2024
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
Copyright © 2025 Bayalu