Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂತೆಯೊಳಗಿನ ಧ್ಯಾನ
Share:
Poems May 10, 2022 ಜ್ಯೋತಿಲಿಂಗಪ್ಪ

ಸಂತೆಯೊಳಗಿನ ಧ್ಯಾನ

ಈಗ ಗಾಳಿಗೆ ತೂರಿ ಹೋಗುವ ಜೊಳ್ಳು
ಬಯಲೊಳಗೆ ಜೋಳಿಗೆಗೆ ಖಾಲಿ

ಈ ಊರೇನು ಆ ಊರೇನು
ಇರದ ಊರಲಿ ಕಾಲೂರುವೆ

ಮೋಡದ ಮರೆಯಿಂದ ಬಂದ
ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ

ಗಾಳಿಯೂ ತೂರದ ಜೊಳ್ಳು
ಜೋಳಿಗೆಗೆ ತುಂಬಿದೆ ಬಯಲು

ಈ ಮಾತೇನು ನಡೆದುದಲ್ಲಾ ನುಡಿದುದಲ್ಲಾ
ಬಯಲು ಆಡಿಸಿದುದು

ಅನುಭಾವವೆಂಬುದು ಬಯಲೇ
ಏಕತಾರಿ ಯ ತಂತಿ ನುಡಿಸಿದ ನಿಸದ್ದು.

Previous post ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
Next post ನಿನ್ನೆ-ಇಂದು
ನಿನ್ನೆ-ಇಂದು

Related Posts

ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...
ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...

Comments 1

  1. ರವೀಂದ್ರ ಸುಂಕಾಪುರ
    May 19, 2022 Reply

    ಅನುಭಾವವನ್ನು ಅನುಭಾವಿ ಕವಿ ಹೇಳುವ ಮಾತುಗಳು ರಹಸ್ಯ ಒಡಪುಗಳಂತಿರುತ್ತವೆ. ನಿಮ್ಮ ಕವನಗಳ ಕೆಲವು ಸಾಲುಗಳು ಚಿಂತನೆಗೆ ಹಚ್ಚುತ್ತವೆ.

Leave a Reply to ರವೀಂದ್ರ ಸುಂಕಾಪುರ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ನಾನು  ಬಿಂಬ
ನಾನು ಬಿಂಬ
September 13, 2025
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
Copyright © 2025 Bayalu