Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶಾಂತಿ
Share:
Poems April 11, 2025 Bayalu

ಶಾಂತಿ

ಪಯಣದ ಉಬ್ಬುತಗ್ಗು ಹಾದಿಯಲಿ,
ಗಂಧದ ಕಣವಾಗು ಬಯಲಲಿ,
ಸುಮದ ದಳವಾಗು ವನದಲಿ,
ಓ ಮನವೇ,
ಕಂದನ ಮುಗ್ದ ನಗುವಾಗು.| ೧ |

ಹರುಷ ದುಗುಡಗಳ ಮೇಳದಲಿ,
ಮಧುರ ನೆನಪುಗಳ ಹೊಳೆಯಾಗು,
ಹಾಡಾಗು ಕಾಡುವ ನೋವಿಗೆ,
ಓ ಮನವೇ,
ಬಾನಲಿ ಹಾರುವ ಹಕ್ಕಿಯಾಗು. | ೨ |

ಕಷ್ಟಸುಖಗಳು ಬೆರೆತ ಬದುಕಿನಲಿ,
ಚಿಂತನೆಯ ಮುನಿಯಾಗು ಗದ್ದಲದಲಿ,
ಹರಿವ ನದಿಯಾಗು ಹರುಷದಲಿ
ಓ ಮನವೇ,
ಕರುಣೆ ಮಮತೆಗಳ ಸೆಲೆಯಾಗು. | ೩ |

ನೇಸರನ ದಿಗಂತದಂಚಿನ ಪಥದಲಿ,
ಮುಪ್ಪುದೇಹ ಕೊನೆ ಕೋರಿದಂದು,
ಮುಕ್ತನಾಗು ತುಂಬು ಹೃದಯದಲಿ,
ಓ ಮನವೇ,
ಪರಮ ಶಾಂತಿಯ ನೆಲೆಯಾಗು. | ೪ |

-ಅಂಬಳೆ ನಾಗ
(ರವೀಂದ್ರನಾಥ್ ಟಾಗೋರ್ ಅವರ ಕವಿತೆಯಿಂದ ಸ್ಫೂರ್ತಿ ಪಡೆದು)

Previous post ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
Next post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು

Related Posts

ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
ಭವ ರಾಟಾಳ
Share:
Poems

ಭವ ರಾಟಾಳ

September 10, 2022 ಕೆ.ಆರ್ ಮಂಗಳಾ
ಇಗೋ ಹರಾಜಾಗುತ್ತಿದೆ ಈ ದೇಹ ಪ್ರತಿ ದಿನ, ಪ್ರತಿ ಗಳಿಗೆ ಕಾಣದ ಖದೀಮನ ಕೈಗೆ ಸಿಕ್ಕು ತನ್ನದಲ್ಲದ ಕಾಯವನು ಹರಾಜು ಹಾಕುತ್ತಲೇ ಇರುತ್ತಾನೆ ಕ್ಷಣಾರ್ಧದ ಬಿಡುವೂ ಕೊಡದೆ...

Comments 3

  1. Raviraju A
    Apr 20, 2025 Reply

    ಮುಕ್ತವಾಗಲಿ ಮನವು ಎಲ್ಲಾ ಕ್ಲೀಷೆಗಳಿಂದ… ಶಾಂತ ಲಹರಿಯಂತಿದೆ ಭಾವನೆ.

  2. ಕೀರ್ತಿ ಎನ್, ಗುಂಡ್ಲುಪೇಟೆ
    Apr 28, 2025 Reply

    ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ- ಮಾರ್ಮಿಕವಾದ ಸಾಲುಗಳು. ಗಂಧದ ಕಣವಾಗುವುದು!

  3. ಉಮಾದೇವಿ ಶಂಕರಪ್ಪ
    May 1, 2025 Reply

    ಬಯಲು ಕವನಗಳು ಮತ್ತೆ ಮತ್ತೆ ಓದುವಂತಿವೆ✌️

Leave a Reply to ಉಮಾದೇವಿ ಶಂಕರಪ್ಪ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಲಿಂಗಾಯತ ಸ್ವತಂತ್ರ ಧರ್ಮ
ಲಿಂಗಾಯತ ಸ್ವತಂತ್ರ ಧರ್ಮ
July 10, 2023
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
ಮೊಗ್ಗಾಯಿತು ಅರಿವಿಗೆ ಹಿಗ್ಗಾಯ್ತು: (ಅನಿಮಿಷ 12)
December 9, 2025
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
Copyright © 2026 Bayalu