Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
…ಬಯಲನೆ ಬಿತ್ತಿ
Share:
Poems August 11, 2025 ಜ್ಯೋತಿಲಿಂಗಪ್ಪ

…ಬಯಲನೆ ಬಿತ್ತಿ

ಅಲ್ಲಿ
ನೇತಾಡುವ
ಪಟಗಳೆಲ್ಲಾ ನಿನ್ನೆಯವು
ಯಾರಿದ್ದಾರೆ…ಯಾರಿಲ್ಲ…ಯಾರೆಲ್ಲ

ಕಣ್ಣೊಳಗಣ ರೂಹು ಕಣ್ಣ ಕೊಲ್ಲದು
ಕಂಗಳ ಮರೆಯ ಕತ್ತಲಿಗೆ
ಕಂಗಳೇ ಪ್ರಮಾಣ

ಪದದ ಅರ್ಥ ಬಿಟ್ಟು
ಕೊಡದ ಗುಟ್ಟು

ನಿಂದರೆ ನೆಳಲಿಲ್ಲ
ನಡೆದರೆ ಹೆಜ್ಜೆಯಿಲ್ಲ

ಊರಿಂದ ಹೋದವರು
ದೂರದ ಸುದ್ದಿ ಹೇಳರು

ಮರವೇ ಬಿದ್ದು ಒಣಗಿತು
ನೆಳಲು
ಇನ್ನೇನು ಇಲ್ಲ

ನೆಲಕ್ಕೆ ಬಿದ್ದ ಹಣ್ಣು
ಮಣ್ಣಾಗುವುದ ಕಾಯುತ್ತಾ ಇದೆ ಬೀಜ.

Previous post ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
Next post ಪೊರೆವ ದನಿ…
ಪೊರೆವ ದನಿ…

Related Posts

ಈ ಕನ್ನಡಿ
Share:
Poems

ಈ ಕನ್ನಡಿ

March 6, 2024 ಜ್ಯೋತಿಲಿಂಗಪ್ಪ
ಈಗೀಗ ಈ ಕನ್ನಡಿ ನನ್ನ ಮುದುಕನಾಗಿ ತೋರಿಸುತ್ತಿದೆ ಯುವಕನಾಗಿ ಕಾಣಿಸುತ್ತದೆ ನಾನೇನು…. ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ ಈ ಕನ್ನಡಿ...
ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...

Comments 1

  1. ಡಾ.ಉಮೇಶ ಸೊರಬ
    Aug 13, 2025 Reply

    ಜ್ಯೋತಿಲಿಂಗಪ್ಪ ಶಿವನಕೆರೆ ಅವರ ” ಬಯಲನೆ ಬಿತ್ತಿ ” , ಕಾಲದ ಪರಿಧಿಯಾಚೆ ನಿಂತ ಜಾಗೃತ ಮನಸ್ಸೊಂದು ‘ ಬಯಲು ‘ ಜಿಜ್ಞಾಸೆ ಗೆ ಆತುಕೊಂಡು ಮನುಷ್ಯ ಸಂಬಂಧಗಳ ಅರ್ಥವನ್ನು ವ್ಯಾಖ್ಯಾನಿಸುವ ಅಪರೂಪದ ಕವಿತೆಯಾಗಿ ಮೂಡಿಬಂದಿದೆ.ಕವಿಯ ಅರಿವು ಮತ್ತು ಅನುಭವಗಳು ಕವಿತೆಯ ಆಶಯವನ್ನು ವಿಶೇಷ ರೂಪಕಗಳ ಮೂಲಕ ಹೃದ್ಯಗೊಳಿಸುವ ಕುಶಲಕಾರ್ಯ ಇಲ್ಲಿ ವಿಶೇಷವಾಗಿ ಗೋಚರಿಸುತ್ತದೆ.’ ಪದದ ಅರ್ಥವನ್ನು ಬಿಟ್ಟುಕೊಡದ ಗುಟ್ಟ’ ನು ಬಯಲುಮಾಡ ಹೊರಡುವ ಸಹೃದಯರಿಗೆ ಈ ಕವಿತೆ ಒಂದು ಕೌತುಕದ ಸವಾಲೇ ಆಗಿದೆ…..
    ಕವಿಗೆ ಅಭಿನಂದನೆಗಳು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಶಿವನ ಕುದುರೆ…
ಶಿವನ ಕುದುರೆ…
May 1, 2019
ನನ್ನ ಬುದ್ಧ ಮಹಾಗುರು
ನನ್ನ ಬುದ್ಧ ಮಹಾಗುರು
January 4, 2020
ಪಾದಕೂ ನೆಲಕೂ…
ಪಾದಕೂ ನೆಲಕೂ…
June 14, 2024
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
Copyright © 2025 Bayalu