Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪೊರೆವ ದನಿ…
Share:
Poems August 11, 2025 ಕೆ.ಆರ್ ಮಂಗಳಾ

ಪೊರೆವ ದನಿ…

ಮೈಯೆಲ್ಲಾ ಕಿವಿಯಾಗಿ
ಮನವೆಲ್ಲಾ ಕಣ್ಣಾಗಿ
ಕೇಳಿಸಿಕೊಂಡೆನಯ್ಯಾ
ನೀನಾಡಿದ ಒಂದೊಂದು ನುಡಿಯ
ಮರೆತು ಹೋಗದಂತೆ
ನಾಲಿಗೆಗೆ ಮಂತ್ರವಾಗಿಸಿದೆ
ಜಾರಿಹೋಗದಂತೆ
ಜೋಪಾನದಿ ಎದೆಗಿಳಿಸಿಕೊಂಡೆ.

ಇಲ್ಲಿದೆ ಕೊಳೆ ಅಲ್ಲಿದೆ ಹೊಲೆ
ಇದೋ ನೋಡು
ದುರ್ವಿಚಾರಗಳ ನೆಲೆ
ಅದೇಕೆ ಬಂತು
ತನ್ನೆಲ್ಲಾ ಬಳಗಸಹಿತ
ದುರ್ಗುಣಗಳ ದಂಡು
ಹುಡುಕಿ ತೆಗೆ ತೆವಲುಗಳ
ಹಿಸುಕಿ ನೋಡು
ನಂಬಿಕೆಗಳ, ಭಾವಗಳ
ಬೂಟಾಟಿಕೆಯ ನಡೆಗಳ
ತೋರುತ್ತ ಹೋದೆಯಯ್ಯಾ
ಮಿಂಚಿನ ಚಾಟಿಯಂತೆ…

ಹಗಲುರಾತ್ರಿ ಎನದೆ
ಬೇಡದ್ದು, ಮರೆತದ್ದು
ಅಗತ್ಯವೇ ಇಲ್ಲದ್ದು
ಎಲ್ಲ ಕಲಬೆರಕೆಯಾಗಿ
ಸುಳಿಯಾಗಿ ಸೆಳೆವಾಗ
ಎದೆಯುದ್ದ, ಕೊರಳುದ್ದ
ಉಕ್ಕೇರಿ ಅಪ್ಪಳಿಸುವಾಗ
ಕೊಚ್ಚಿ ಹೋಗದಂತೆ
ನಿಲುವ ಗುಟ್ಟ ಹೇಳಿಕೊಟ್ಟೆ.

ಸುತ್ತುವರಿದ ಕದಳಿಯಲಿ
ಕಳೆದುಹೋಗದಂತೆ
ಎದುರಿನ ಜಾಲಕ್ಕೆ
ಸಿಕ್ಕಿ ಬೀಳದಂತೆ
ನನ್ನದೇ ಮೋಸಕ್ಕೂ
ನಾನೊಳಗಾಗದಂತೆ
ಭವದ ಜಟಿಲತೆಗಳಿಗೆ
ಎದೆಗುಂದದಂತೆ
ಮೂರರ ಮಾಯೆಗೆ
ಮಾರುಹೋಗದಂತೆ
ಪಾರಾಗುವ ಪಟ್ಟುಗಳ
ಕಲಿಸಿ ಕಾಪಾಡಿದೆ.

Previous post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ
Next post ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)

Related Posts

ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಾರಿ ಬಿಡಿ…
ದಾರಿ ಬಿಡಿ…
December 6, 2020
ನಾನು ಯಾರು? ಎಂಬ ಆಳನಿರಾಳ – 2
ನಾನು ಯಾರು? ಎಂಬ ಆಳನಿರಾಳ – 2
April 6, 2020
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ಗುಟುಕು ಆಸೆ…
ಗುಟುಕು ಆಸೆ…
May 8, 2024
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
Copyright © 2025 Bayalu