Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನನ್ನ ಬುದ್ಧ ಮಹಾಗುರು
Share:
Poems January 4, 2020 ಪದ್ಮಾಲಯ ನಾಗರಾಜ್

ನನ್ನ ಬುದ್ಧ ಮಹಾಗುರು

ನನ್ನ ಬುದ್ಧ ಮಹಾಗುರುವು…
ಧರ್ಮವಲ್ಲ ದೈವವಲ್ಲ
ನುಡಿಯಲ್ಲ ಪಡಿಯಲ್ಲ
ವಿಗ್ರಹವಲ್ಲ ಅನುಗ್ರಹವಲ್ಲ
ಸಂಭ್ರಮವಲ್ಲ ಉತ್ಸವವಲ್ಲ
ಸುಖವಲ್ಲ ದುಃಖವಲ್ಲ
ವಾದವಲ್ಲ ಬೇಧವಲ್ಲ
ಮಂತ್ರವಲ್ಲ ತಂತ್ರವಲ್ಲ
ಮಾನಾವಮಾನ ಅಲ್ಲವೇ ಅಲ್ಲ!

ನನ್ನ ಬುದ್ಧ ಮಹಾಗುರುವೆಂದರೆ
ಕಥೆಯಲ್ಲ ವ್ಯಥೆಯಲ್ಲ
ಜಾತಿಯಲ್ಲ ಜ್ಯೋತಿಯಲ್ಲ
ಬೆಡಗಲ್ಲ ಬೆರಗಲ್ಲ
ಜನುಮವಲ್ಲ ಜರೆಯಲ್ಲ
ಕೋಪವಲ್ಲ ತಾಪವಲ್ಲ
ರೂಪವಲ್ಲ ನೋಟವಲ್ಲ
ಅನ್ಯವಲ್ಲ ಅನನ್ಯವಲ್ಲ
ಧ್ಯಾನವಲ್ಲ ಧಾತನಲ್ಲ
ಅವ ಲೋಕಪರ ನಿರಂತರ…
ನನ್ನ ಬುದ್ಧಮಹಾಗುರುವು…

ಅಲ್ಲಮನ ಅಲ್ಲಗಳಲಿ
ಬಸವಣ್ಣನ ತಾಯ್ಗರುಳ ಸಂಬಂಧದಲಿ
ವೇಮನನ ವಿಮಲ ಪ್ರಜ್ಞೆಯಲಿ
ಸೂಫಿಗಳ ನಡೆಸಾರದಲಿ
ಕಬೀರನ ಕರೆಗಳಲಿ
ತಾವೋನ ತಾವಲ್ಲದ ತಾವಿನಲಿ
ಮಂಟೇದಯ್ಯನ ನೀಲಿ ಗ್ಯಾನದಲಿ
ಬಾಬಾಸಾಹೇಬರ ಮಹಾಕರುಣೆಯಲಿ
ಸದಾ ಎಚ್ಚರದಿ ಎಚ್ಚೆತ್ತುಕೊಂಡಿಹನು!!!

ಆದರೆ…
ತಪ್ಪು ನುಡಿವ ಕರ್ಮಿಯಾಗಿಹ
ಜಾತಿಬಿಡದ ನೀಚನಾಗಿಹ
ಸಂಗ್ರಹೇಚ್ಚೆಗೆ ಜಾರಿಕೊಂಡಿಹ
ನಾ ಮೇಲೆನುವ ಮದಾಂಧನಾಗಿಹ
ನನ್ನ ನಾ ಕಲ್ಪಿಸಿಕೊಳ್ಳುತ್ತಿರುವ
ನನ್ನ ನಾ ಸುಖಿಸುತ್ತಿರುವ
ನನ್ನೊಳು ನಾ ಚದುರಿಹೋಗಿರುವ
ನನ್ನೊಳು ಹುಡುಕಲು ಆತ ಎಲ್ಲಿಹನು?

Previous post ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
Next post ಗುರುಪಥ
ಗುರುಪಥ

Related Posts

WHO AM I?
Share:
Poems

WHO AM I?

June 17, 2020 Chittara K. V
I have a wide brain And a open mind I think a lot at times But I come to a point To ask myself- Who am I? I swallow the pain But speak with the...
ಕಣ್ಣ ಪರಿಧಿ
Share:
Poems

ಕಣ್ಣ ಪರಿಧಿ

February 10, 2023 ಜ್ಯೋತಿಲಿಂಗಪ್ಪ
ಕಣ್ಣ ಬಿಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಮುಚ್ಚಿ ಕಾಣುವುದು ಏನು ಏನೂ ಇಲ್ಲ ಕಣ್ಣ ಒಳಗ ಕಾಣುವುದು ಕಾಣು ಕಾಣು ಕಾಣು ಏನು ಏನೂ ಇಲ್ಲ ಕಣ್ಣ ಪರದೆಯ ದಾಟಿ ಹೋದವರು ಯಾರು...

Comments 6

  1. Mahantesh Mysuru
    Jan 6, 2020 Reply

    ಬುದ್ದ ಮಹಾಗುರು ಕವನ ತುಂಬಾ ಚನ್ನಾಗಿದೆ. ಮತ್ತೆ ಮತ್ತೆ ಮನನ ಮಾಡುವಂತಿದೆ. ರೂಪವಲ್ಲ ನೋಟವಲ್ಲ, ಅನ್ಯವಲ್ಲ ಅನನ್ಯವಲ್ಲ, ಧ್ಯಾನವಲ್ಲ ಧಾತನಲ್ಲ… ಸಾಲುಗಳು ಬಹಳ ಸೊಗಸಾಗಿವೆ.

  2. ಶಿವಕುಮಾರ್ ಸಾಲಿ
    Jan 8, 2020 Reply

    ಬುದ್ದನಂತಹ ಜ್ಞಾನಿಯನ್ನು ನಿಜಕ್ಕೂ ಎಲ್ಲೆಲ್ಲಿ ಕಾಣಬೇಕೆಂದು ಸೂಚಿಸಿದ ಶರಣ ನಾಗರಾಜವರಿಗೆ ವಂದನೆಗಳು

  3. Chetan M.P
    Jan 9, 2020 Reply

    ಕವನದ ಒಂದೊಂದು ಪದವೂ ಮನನಯೋಗ್ಯ

  4. Dinesh P
    Jan 14, 2020 Reply

    ಬುದ್ಧನನ್ನ ಬದುಕಿನಲ್ಲಿ ಕಾಣುವ ಸುಂದರ ಪರಿಕಲ್ಪನೆ.

  5. Jayaraj Bidar
    Jan 16, 2020 Reply

    ಬುದ್ದನನ್ನು ಎಲ್ಲಿ, ಹೇಗೆ ಹುಡುಕಿಕೊಳ್ಳಬೇಕೆಂದು ಗೊತ್ತಾಯಿತು. ಬುದ್ದನ ಜಾಗದಲ್ಲಿ ಬಸವನ ಹೆಸರು ಹಾಕಿದರೂ ಕವನಕ್ಕೆ ಚ್ಯುತಿ ಬರುವುದಿಲ್ಲ. ಮಹಾತ್ಮರನ್ನು ಹೀಗೇ ಹುಡುಕಿಕೊಳ್ಳಬೇಕು.

  6. Chinmayi
    May 15, 2021 Reply

    ಬುದ್ದ ಬುದ್ದನಿಗೇ ಸರಿ

Leave a Reply to Chinmayi Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ವೀರದಾಸಮ್ಮನ ಸಹಜಾಮನಸ್ಕ ಯೋಗ
ವೀರದಾಸಮ್ಮನ ಸಹಜಾಮನಸ್ಕ ಯೋಗ
October 21, 2024
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ನನ್ನೊಳಗಿನ ನೀನು
ನನ್ನೊಳಗಿನ ನೀನು
April 29, 2018
Copyright © 2025 Bayalu