Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಾರಿಯಲ್ಲದ ದಾರಿ…
Share:
Poems October 10, 2023 ಕೆ.ಆರ್ ಮಂಗಳಾ

ದಾರಿಯಲ್ಲದ ದಾರಿ…

ಗುರು ತೋರಿದ ದಾರಿಯಲಿ
ಬಂಡೆಗಳ ಸಿಡಿಸಬೇಕು
ಗುಡ್ಡಗಳ ಒಡೆಯಬೇಕು
ಕಮರಿ, ಹೊಳ್ಳ ದಾಟಬೇಕು
ಮುಳ್ಳುಗಂಟಿ ಕಿತ್ತಬೇಕು

ಇಷ್ಟಪಟ್ಟು ನಡೆಯದಿದ್ದರೆ
ಇದು ಬಲು ಕಷ್ಟದ ದಾರಿ

ಧರ್ಮಗ್ರಂಥಗಳ ಹಿಡಿದರೆ
ಎದುರಿದ್ದೂ ಕಾಣದಾ ದಾರಿ

ಮಾತಿನಾಟಕೆ ಸಿಲುಕಿದರೆ
ಮರೆಯಾಗೋ ದಾರಿ

ಅರ್ಥಕ್ಕೆ ಆತುಕೊಂಡರೆ
ಪತ್ತೆಯಾಗದ ದಾರಿ

ಜ್ಞಾನದಾಹಕೆ ಬಾಯ್ತೆರೆದರೆ
ಮರೀಚಿಕೆಯಾಗೋ ದಾರಿ

ಯೋಗದ ಬೆನ್ನ ಬಿದ್ದರೆ
ದೂರ ಉಳಿಯುವ ದಾರಿ

ನಮ್ಮ ಕಗ್ಗಾಡನ್ನು
ನಾವೇ ತರಿಯಬೇಕು
ನಮ್ಮ ಕದಳಿಯ ಹೊಲಬ
ನಾವೇ ಅರಿಯಬೇಕು

ಕೆಚ್ಚಿರಬೇಕು ನಡೆಯುದಕೆ
ಹುಚ್ಚಿರಬೇಕು ಬಿಡೆ ಎನ್ನಲಿಕೆ
ಪಟ್ಟುಹಿಡಿಯಲೇ ಬೇಕು
ಬಾಗದ ಮನಸಿನ ಮುಂದೆ

ಸರಳಾತಿ ಸರಳವಾಗಿದ್ದರೂ
ಸುಲಭದಲಿ ಸಿಗದು
ಹಮ್ಮುಬಿಮ್ಮುಗಳಿಗಂತೂ
ಹತ್ತಿರವೇ ಸುಳಿಯದು
ಅಂತಿಂಥದಲ್ಲ ಈ ಮಹಾದಾರಿ
ಕರುಣೆಯಲಿ ಗುರು ಕೊಟ್ಟ
ಶಿವಪಥಕೊಯ್ಯುವ ಈ ರಹದಾರಿ.

Previous post ಕನ್ನಡಿ ನಂಟು
ಕನ್ನಡಿ ನಂಟು
Next post ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ

Related Posts

ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...
ಆಕಾರ-ನಿರಾಕಾರ
Share:
Poems

ಆಕಾರ-ನಿರಾಕಾರ

January 7, 2022 ಜ್ಯೋತಿಲಿಂಗಪ್ಪ
ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...

Comments 1

  1. Padmalaya
    Oct 11, 2023 Reply

    ಕಿತ್ತಬೇಕು ಅಲ್ಲಮ್ಮಕೀಳಬೇಕು

Leave a Reply to Padmalaya Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಕಡಕೋಳ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
August 10, 2023
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
Copyright © 2025 Bayalu