Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುಟುಕು ಆಸೆ…
Share:
Poems May 8, 2024 ಜ್ಯೋತಿಲಿಂಗಪ್ಪ

ಗುಟುಕು ಆಸೆ…

ಕಣ್ಣ
ಮುಂದಣ ಬೆಳಕು ಹಿಂದಣ ನೆರಳು
ಕಂಡೂ ಕಾಣವು

ಈ
ಕಣ್ಣಿಗೆ ನಾಚಿಕೆಯೇ ಸದ್ದು
ಕಾಣಲು ಹವಣಿಸುವುದು
ಸದ್ದು ಕಾಣುವುದೇ..ಕೇಳಿಸಿಕೋ

ಗಗನಕ್ಕೆ ಬಯಲುಂಟೇ
ಬಯಲಿಗೆ ಗಗನ ಉಂಟೇ

ರಗುತದ ನೀರೆಲ್ಲವ ಹಿಂಡಿ ಹಿಂಡಿ
ತೆಗೆದಿದೆ ಈ ಬಿಸಿಲು
ಒಣಗಲು ಏನುಂಟು

ಮೇಲೆ ಕೆಳಗೆ ಎಂಬುದು
ನನ್ನ ಕಣ್ಣ ಗೆರೆ

ಆದಿಗೂ ಮುನ್ನ ಏನಿತ್ತು
ಅಂತ್ಯದ ಆಚೆ ಏನಿದೆ

ಇರುವೆ ಅಳೆಯಲು ಮಾನ ಆನೆ

ಮರಳ ಕಣದಷ್ಟಿರುವ ಮನಕೆ
ಬಂಡೆಯಷ್ಟು ಬಯಕೆ
ಉದ್ದಕ್ಕೂ ಇಚ್ಛೆ ನೆರಳು

ಹಸಿ ರಕ್ತ ಒಣಗಿದೆ
ರಾಗವಿಲ್ಲ ದ್ವೇಷ ಇಲ್ಲ

ಕಳ್ಳಗತ್ತಲು ಸುಳ್ಳು ಹುಡುಕುವುದು

ಈ
ಆಸೆ ಒಂದು ಗುಟುಕು
ಒಂದೊಂದೇ ಗುಟುಕು ಈ ಆಸೆ

ಬಾಯಾರದೆ ಕುಡಿದು ಬಿಟ್ಟ ನೀರು
ಈ ಕೆರೆ ನುಂಗುತಿದೆ

ಖಾಲೀ ಇರುವ ಕನ್ನಡಿ
ಎದುರು ನಿಂತು ನಾನು ತುಂಬುತಿರುವೆ.

Previous post ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
Next post ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…

Related Posts

ನಾನೆಲ್ಲಿ ಇದ್ದೆ?
Share:
Poems

ನಾನೆಲ್ಲಿ ಇದ್ದೆ?

April 29, 2018 ಕೆ.ಆರ್ ಮಂಗಳಾ
ಶರಧಿ ಭೂಮಿಯ ನುಂಗಿ ಸೂರ್ಯ ಶರಧಿಯ ನುಂಗಿ ಆಗಸ ಸೂರ್ಯನ ನುಂಗಿ ವಾಯು ಆಗಸ ನುಂಗಿ ಎಲ್ಲ ಎಲ್ಲವ ನುಂಗಿ ನೊಣೆಯುವಾಗ ನಾನೆಲ್ಲಿ ಅಡಗಿದ್ದೆ? ಬಾಲ್ಯ ಭ್ರೂಣವ ನುಂಗಿ ಹರಯ ಬಾಲ್ಯವ...
ಶಾಂತಿ
Share:
Poems

ಶಾಂತಿ

April 11, 2025 Bayalu
ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ, ಸುಮದ ದಳವಾಗು ವನದಲಿ, ಓ ಮನವೇ, ಕಂದನ ಮುಗ್ದ ನಗುವಾಗು.| ೧ | ಹರುಷ ದುಗುಡಗಳ ಮೇಳದಲಿ, ಮಧುರ ನೆನಪುಗಳ ಹೊಳೆಯಾಗು,...

Comments 2

  1. Padmalaya
    May 9, 2024 Reply

    ಜೋತಿಲಿಂಗಪ್ಪನವರ ಕಾವ್ಯದ ಓದು ಸಂಕಟದ ಸಂಗತಿ.ಬೌದ್ಧ ಮೀಮಾಂಸೆ ಒಂದು ಕಡೆ ಹೇಳುತ್ತದೆ….ನಿಸರ್ಗ ಧರ್ಮ ಭಾಷೆ ಮತ್ತು ಮಾತಿಗೆ ಸಿಗುವಂತಹದ್ದಲ್ಲ.ಆದರೆ ಭಾಷೆ ಮತ್ತು ಮಾತಿನ ಹೊರತು ಧರ್ಮ ಇರಲಾರದು. ಈ ನೆಲೆ ಯಿಂದ ಅವರ ಕಾವ್ಯವನ್ನ ಪ್ರವೇಶಿಸಿದರೆ,ಅವರ ಐಡಿಯಾಲಜಿ ಗೊತ್ತಾಗಿ ಬಿಡುತ್ತದೆ.ಐಡಿಯಾಲಜಿ ಇಲ್ಲದೆ ಕಾವ್ಯ ಅಸಾಧ್ಯ.

  2. ವರದರಾಜ್, ಬೆಂಗಳೂರು
    May 9, 2024 Reply

    ಗುಟುಕು ಆಸೆಗಳೇ ಜೀವನವನ್ನು ಸ್ವಾಹಾ ಮಾಡಿಬಿಡುತ್ತವೆ.

Leave a Reply to ವರದರಾಜ್, ಬೆಂಗಳೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
October 5, 2021
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ನೋಟದ ಕೂಟ…
ನೋಟದ ಕೂಟ…
May 10, 2023
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ನಾನು ಯಾರು?
ನಾನು ಯಾರು?
December 8, 2021
Copyright © 2025 Bayalu