Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಳಗಣ ಮರ
Share:
Poems March 12, 2022 ಜ್ಯೋತಿಲಿಂಗಪ್ಪ

ಒಳಗಣ ಮರ

ಈ
ಪದ
ಏನು ನಿಜ ಹೇಳುತ್ತಾ
ನಿಜ ಹೇಳುವುದು ಅಲ್ಲಾ
ಕಾಣುವುದು ಅಲ್ಲಾ
ಕೇಳುವುದು ಅಲ್ಲಾ
ಅನುಭಾವಿಸುವುದು
ಭಾವದಲಿ ಆನು ನಿಜವಾಗುವುದು

ಈ
ಪದ ಅರ್ಥದಲಿ ಏನಿದೆಯೋ
ಅಕ್ಷರ ಬಲ್ಲವರು ಹೇಳಿ
ಓಂ ಹ್ರೀಂ….

ಈ
ಬೀಜದ
ಒಳಗೆ ಮರ ಅಡಗಿದೆ
ತೋರುವುದು ಹೇಗೆ

ನೆಲದಲಿ ಹುದುಗಿಸಬೇಕು
ನೀರು ಎರೆಯಬೇಕು
ಮೇಲಾಗಿ ಕಾಯಬೇಕು

ಆ
ಬೀಜದ ಒಳಗಣ ಮರ
ನಗುತಿದೆ ಈಗ ತೋರಿದರೂ ಕಾಣದು

ಈ
ತೊಗಲಿಗೆ ಹೊಳಪೇ
ರುದ್ರಾಕ್ಷಿ ಕೊಬ್ಬೆಲ್ಲಾ ಒಣಗಿದೆ
ಕನಸೊಳಗೂ ಕಾಡುತ್ತಿಲ್ಲ ಆ ದೇವತೆ.

Previous post ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
Next post ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ

Related Posts

ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...
ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...

Comments 1

  1. Malini Gowda
    Mar 23, 2022 Reply

    ಬದುಕಿನ ಹೂರಣ ಮರೆಯಾದಾಗ ಒಳಗಣ ಮರ ಒಣಗಿರುತ್ತದೋ ಅಥವಾ ಸರಿಯಾದ ಆರೈಕೆ ಸಿಗದೆ ಬೀಜವಿದ್ದಾಗ್ಯೂ ಮರ ಬೆಳೆಯದೇ ಹೋಗುತ್ತದೋ… ಕಾವ್ಯದ ಸ್ಫುರಣಗಳು ಅನಂತ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
ಗುರು-ಶಿಷ್ಯ ಸಂಬಂಧ
ಗುರು-ಶಿಷ್ಯ ಸಂಬಂಧ
August 8, 2021
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ವಿದ್ಯೆಯೊಳಗಣ ಅವಿದ್ಯೆ
ವಿದ್ಯೆಯೊಳಗಣ ಅವಿದ್ಯೆ
February 6, 2019
Copyright © 2025 Bayalu