Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದ್ದೇನೆ ನಾನು?
Share:
Poems February 10, 2023 ಕೆ.ಆರ್ ಮಂಗಳಾ

ಎಲ್ಲಿದ್ದೇನೆ ನಾನು?

ನರನಾಡಿಗಳಲ್ಲೋ
ರಕ್ತ ಮಾಂಸಗಳಲ್ಲೋ
ಮಿದುಳಿನಲೋ ಹೃದಯದಲೋ,
ಚರ್ಮದ ಹೊದಿಕೆಯಲೋ
ಎಲ್ಲಿದ್ದೇನೆ ನಾನು?

ಬಾಡುವ ದೇಹದಲೋ
ಬದಲಾಗೋ ವಿಚಾರಗಳಲೋ
ಬೆಂಬಿಡದ ಭಾವಗಳಲ್ಲೋ
ಬೇರೂರಿದ ನಂಬಿಕೆಗಳಲ್ಲೋ
ಎಲ್ಲಿದ್ದೇನೆ ನಾನು?

ಈ ಹೊತ್ತು ಎಂಬುದೇ
ಕೈಗೆಟುಕದಿರುವಾಗ
ಸರಿವ ಕ್ಷಣಗಳಲ್ಲೋ
ಬರುವ ಗಳಿಗೆಗಳಲ್ಲೋ
ಎಲ್ಲಿದ್ದೇನೆ ನಾನು?

ಕಟ್ಟಿದ್ದು ಮರೆಯುತ್ತಾ
ಕೆಡವಿದ್ದು ತುಳಿಯುತ್ತಾ
ಕಟ್ಟುತ್ತಾ ಕೆಡವುತ್ತಾ
ಆಡುವಾಟವೇ ಇಲ್ಲವಾಗಿರಲು
ಎಲ್ಲಿದ್ದೇನೆ ನಾನು?

ಎಲ್ಲಿಂದ ಬಂದದ್ದು
ಎಲ್ಲಿಗೆ ಹೊರಟದ್ದು
ಯಾರು ಯಾರಿಗೆ ಸಾಕ್ಷಿ
ನಿಲಲೊಲ್ಲದ ನಡಿಗೆಯಲಿ
ಎಲ್ಲಿದ್ದೇನೆ ನಾನು?

ಹೆತ್ತವರು ಹೇಳಲಿಲ್ಲ
ನೆರೆದವರು ತಿಳಿಸಲಿಲ್ಲ
ಪುಸ್ತಕದಿ ಬರೆದಿಲ್ಲ
ಪಾಠದಲಿ ಓದಲಿಲ್ಲ
ಎಲ್ಲಿದ್ದೇನೆ ನಾನು?

ಕಣ್ತೆರೆದು ಹುಡುಕಿದರೂ
ಕಣ್ಮುಚ್ಚಿ ಕುಳಿತರೂ
ಹಗಲಲ್ಲಿ ಕಾಣಲಿಲ್ಲ
ರಾತ್ರಿಯಲಿ ಜೊತೆಗಿಲ್ಲ
ಎಲ್ಲಿದ್ದೇನೆ ನಾನು?

ಭವದೊಳಗೆ ಮುಳುಗಿ
ಕದಳಿಯಲಿ ಕಳೆದು
ಗುರು ಕೃಪೆಗೆ ಬಾಯಾರಿ
ಬಯಲ ಬಡಬಡಿಸುವ ಜೀವ
ಎಲ್ಲಿರುವೆ ನೀನು?

Previous post ಕಣ್ಣ ಪರಿಧಿ
ಕಣ್ಣ ಪರಿಧಿ
Next post ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ

Related Posts

ಗುರುವಿಗೆ ನಮನ…
Share:
Poems

ಗುರುವಿಗೆ ನಮನ…

January 8, 2023 ಕೆ.ಆರ್ ಮಂಗಳಾ
ನೋಟದ ನಂಜನು ಕೂಟದ ತೊಡಕನು ಭವದ ಹುಟ್ಟನು ಹುಟ್ಟಿನ ಗುಟ್ಟನು ಬಿಡಿಸಲು ಕಲಿಸಿದ ಗುರುವಿಗೆ ನಮನ ಭಾವದ ಒಳಗನು ವಿಷಯದ ಹುರುಳನು ವಿದೇಹದ ಇರುವನು ತ್ರಿಪುಟಿಯ ತಿರುಳನು ಹುರಿಯಲು...
ನಾನು  ಬಿಂಬ
Share:
Poems

ನಾನು ಬಿಂಬ

September 13, 2025 ಜ್ಯೋತಿಲಿಂಗಪ್ಪ
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು. -ಅಲ್ಲಮ ಈ ಕನ್ನಡಿಯಲಿ ಕಾಣುವ ನನ ಬಿಂಬವ ಓಡಿಸುವುದು ಹೇಗೆ…??!! ಕಣ್ಣ ಮುಚ್ಚಿದರೆ ಕನ್ನಡಿ ದೂರ ಕಣ್ಣ ತೆರೆದರೆ ನಾನು ಅದೂರ...

Comments 4

  1. ಸುನಂದಾ ರಾಚಣ್ಣ, ದಾವಣಗೆರೆ
    Feb 11, 2023 Reply

    ಮನದಾಳದ ಭಾವಗಳನ್ನೆಲ್ಲಾ ದಾಟಿ ಗುರಿಯತ್ತ ಸಾಗಿರುವೆ… ಸರಿವ ಕ್ಷಣಗಳ, ಬರುವ ಗಳಿಗೆಗಳ ಕಟ್ಟುತ್ತಾ ಕೆಡವುತ್ತಾ ಮುಂದೆ ಸಾಗಿ, ಗುರು ಪಾದಕ್ಕೆ ಅರ್ಪಿತಳಾಗಿರುವೆ… ಎಲ್ಲಿಂದ ಬಂದು ಅದೆಲ್ಲಿಗೆ ಹೋಗುವ ಹಂಬಲ? ಬಯಲಾಗುವ ತುಡಿತ… ಹೇಗೆ ಬರೆದೆ? ಒಂದೊಂದು ಹಂತ ದಾಟಿ ಗುರುಗೆ, ಗುರಿಗೆ ಹತ್ತಿರಾಗುತಿರುವೆ… ಈ ಪಯಣ ನನ್ನ ಕಲ್ಪನೆಗೂ ಮೀರಿದ್ದು ಮಗಳೇ!!!
    ✍🏼 ಸುನಂದಾ ಕಪ್ಪರದ

  2. VEERESH
    Feb 11, 2023 Reply

    ಅದ್ಭುತ ಬರಹ ಮೇಡಂ👌🏻👌🏻👌🏻

  3. Venkatesh
    Feb 11, 2023 Reply

    🙏

  4. ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ
    Feb 13, 2023 Reply

    “ಪ್ರತಿ ಪದವೂ ನಮ್ಮೊಳಗಿನ. ನಮ್ಮನ್ನು ಹುಡುಕುವಂತೆ ಮಾಡುತ್ತದೆ ,ಎಲ್ಲಿದ್ದೇನೆ ನಾನು ಕವನ. 👌👌👍👍

Leave a Reply to ಶೋಭಾದೇವಿ ಅಮರಶೆಟ್ಟಿ, ಭಾಲ್ಕಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಯಾಕೀ ಗೊಡವೆ?
ಯಾಕೀ ಗೊಡವೆ?
August 10, 2023
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ಹುಲಿ ಸವಾರಿ…
ಹುಲಿ ಸವಾರಿ…
June 10, 2023
ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
April 9, 2021
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
ಬೆಳಕು ನುಂಗಿದ ಕತ್ತಲು
ಬೆಳಕು ನುಂಗಿದ ಕತ್ತಲು
December 9, 2025
ನೆಮ್ಮದಿ
ನೆಮ್ಮದಿ
April 6, 2020
Copyright © 2026 Bayalu