Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಕ್ಷಣದ ಸತ್ಯ
Share:
Poems March 12, 2022 ಕೆ.ಆರ್ ಮಂಗಳಾ

ಈ ಕ್ಷಣದ ಸತ್ಯ

ಧಗಧಗಿಸಿ ಮೇಲೇರುತಿಹ
ಕೆನ್ನಾಲಿಗೆಯ ಈ ಬೆಂಕಿ
ಅಡಗಿತ್ತು ಎಲ್ಲಿ?
ಮರದ ಬೊಡ್ಡೆಯಲೋ?
ಒಣಗಿದ ಸೌದೆಯಲೋ,
ಮದ್ದಗೀರಿದ ಕಡ್ಡಿಯಲ್ಲೋ,
ಊದುತಿಹ ಗಾಳಿಯಲ್ಲೋ?
ಎಲ್ಲಿಂದ ಬಂತು
ಕಣ್ಣ ಕೋರೈಸುವ ಈ ಬೆಳಕು,
ಚಕಮಕದ ಹೊಳಪು,
ಈ ಝಳದ ಧಗೆಯು?
ಆ ಬೊಡ್ಡೆ, ಆ ಒಣಗಿದೆಲೆ,
ಆ ಕಿಡಿಯ ಬೆಸುಗೆಯಲಿ
ಇತ್ತೇ ಇಂಥ ಮೋಹಕದ ಚಳಕ?

ಗಾಳಿಯಲಿ ಕೈ ಬೀಸಿ
ಬಾಚಿಕೊಳಬಹುದೇ ಶಾಖವನು
ಮುಂದಣ ಚಳಿಗೂ ಆದೀತೆಂದು?
ಗಾಜಿನ ಸೀಸೆಯೊಳಗೆ
ತುಂಬಿಕೊಳಬಹುದೇ ಬೆಳಕ
ನಾಳಿನಿರುಳಿಗೆ ಇರಲೆಂದು?
ನಿನ್ನೆಯ ಭೂತವನು
ಬೆನ್ನೇರಿಸಿಕೊಂಡ ಮನಕೆ
ಸದಾ ನಾಳೆಯದೇ ಚಿಂತೆ…

ಈ ಕ್ಷಣಕಾದರೋ
ಹಿಂದು-ಮುಂದುಗಳಿಲ್ಲ
ದಂದುಗದ ಹಂಗಿಲ್ಲ
ಇಲ್ಲೇ, ಈಗಲೇ
ಉರಿದುರಿದು ತೋರಿ,
ತೋರುತ್ತಲೇ ಮರೆಯಾಗಿ
ಕಣ್ಣ ಮುಂದಲೇ ಕರಗುತಿಹ
ಆ ಬೆಂಕಿಗೂ,
ನನ್ನೊಡಲ ಪ್ರಾಣಕ್ಕೂ
ಇಹುದೇ ಏನಾದರೂ ಅಂತರ?

Previous post ಒಳಗಣ ಮರ
ಒಳಗಣ ಮರ
Next post ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…

Related Posts

ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...
ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...

Comments 1

  1. Andanappa
    Mar 23, 2022 Reply

    ಬೆಂಕಿಗೂ ಪ್ರಾಣಕ್ಕೂ ಮೂಲಸಂಬಂಧ ಯಾವುದು? ಇದೇ ನಿರಂತರ ಹುಡುಕುವಿಕೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಮರೆತೆ…
ಮರೆತೆ…
July 4, 2022
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ದಾರಿ ಬಿಡಿ…
ದಾರಿ ಬಿಡಿ…
December 6, 2020
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
Copyright © 2025 Bayalu