ಹುಲಿ ಸವಾರಿ…
ಖಾಲೀ…
ಇರುವೆಯಲ್ಲಾ ಏನಾದರೂ ನೋಡು
ಕಣ್ಣು ತುಂಬಿದೆ ನೋಡಲೇನುಂಟು ನೋಡದು
ಏನಾದರೂ ಕೇಳು
ಕಿವಿ ತುಂಬಿದೆ ಕೇಳಲೇನುಂಟು ಕೇಳದು
ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ
ತುಳುಕಾಡುತಿವೆ
ಇರು ಇಲ್ಲವಾಗಿರು
ನೆನೆ ನೆನೆದು ನೆನಹು ಅಳಿಯಲಿ
ಹುಲಿ ಸವಾರಿ ಮಾಡಿರುವೆ
ಇಳಿಯುವ ಭಯ
ಭಾವರಹಿತ ಆಗುವುದೆಂದರೆ
ಹುಲಿ ಸವಾರಿಯೇ…
ಹಳೆಯ ಗಾಯ ತಾಗಿ ನೋಯಿಸಿತೇ
ಮಾಯದ ಗಾಯ ನೋವು
ಇದ್ದೇನೋ ಇರೆನೋ….
*** *** ***
ಈ
ಮನವ
ನಿನಗೆ ಕೊಟ್ಟಿರುವೆ ಇನ್ನಾವ
ಮನದಲಿ ಧ್ಯಾನಿಸಲಿ ನಿನ್ನ
ಅಕ್ಕಾ
ನಿನ್ನ ಧ್ಯಾನಿಸುವ ವ್ಯಸನ
ಅಶನ ತೊರೆದಿರುವೆ
ಒಲಿಯುವೆಯೋ
ಒಲಿಯೆಯೋ…
ಆವ ಸಂಬಂಧವೂ ಇಲ್ಲ
ಇನ್ನೇನಿದೆ
ಕಾಯ ಮಣ್ಣಾದಡೆ
ಜೀವ ಬಯಲಾಗದೇ
ಅರಿವೇ
ನೀನಾಗಿರಲು ಇನ್ನಾರ ಕೇಳಲಿ
ಬಯಲಾಗದ ಜೀವಕೆ ಕಾಯ
ಮಣ್ಣಾಗುವುದರಿಯದು
ಈ
ಕಣ್ಣ ಕಾಯದಿಂದ
ಬಿಡಿಸು ಕಾಣುವೆ ನಿನ್ನ
ಕಾಣುವ ಕಣ್ಣಿರಲು ಕಾಯ ಮಣ್ಣು
ಧ್ಯಾನಿಸುವುದೇನು ಒಂದು ವ್ಯಸನವೇ…
ಕತೆಗಾರನಾದರೂ ಕತೆಯಲಿ ಬಾಗಿ.
Comments 3
ZABIULLA M. Asad
Jun 12, 2023ನಮಸ್ತೆ ಸರ್
ನಿಮ್ಮ ಎರಡೂ ಕವಿತೆಗಳ ಓದಿನೊಂದಿಗೆ ನನ್ನ ಮುಂಜಾವು ಸಂಪನ್ನವಾಯಿತು ಸರ್.
ಕವಿತೆಗಳ ಅಮೂರ್ತಡೆದೆಗಿನ ಅನುಭಾವದ ನಡಿಗೆ ಆತ್ಮವನ್ನು ತಾಕಿತು. ಗಾಳಿ ಎಲೆಯನ್ನು ಸ್ಪರ್ಶಸಿದ ಹಾಗೆ…
ಮೇಘಕೆ ಹಕ್ಕಿಯ ರೆಕ್ಕೆ ಮುಟ್ಟಿದ ಹಾಗೆ…
ಮಣ್ಣು ಮೆಟ್ಟಿದ ದಾರಿ ಕವಿತೆಯನ್ನು ಸಹ ಓದಿದೆ.
ಧನ್ಯವಾದಗಳು ಸರ್ 🙏🏻💐
ರವಿಕುಮಾರ ಜಗಳೂರು
Jun 14, 2023ಕಂಗಳು ತುಂಬಿದ ಬಳಿಕ ನೋಡಲಿಲ್ಲ, ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ… ಬಸವಣ್ಣನವರ ಆಶಯ ನೆನಪಾಯಿತು…
ದಯಾಶಂಕರ ಮಧುಗಿರಿ
Jun 20, 2023ಕತೆಗಾರನೂ ಕತೆಯಲಿ ಭಾಗಿಯಾದ ಪರಿ, ನನಗೆ ನಾನೊಡ್ಡಿದ ವಿಧಿ!