ಸಂತೆಯೊಳಗಿನ ಧ್ಯಾನ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು
ಬಯಲೊಳಗೆ ಜೋಳಿಗೆಗೆ ಖಾಲಿ
ಈ ಊರೇನು ಆ ಊರೇನು
ಇರದ ಊರಲಿ ಕಾಲೂರುವೆ
ಮೋಡದ ಮರೆಯಿಂದ ಬಂದ
ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ
ಗಾಳಿಯೂ ತೂರದ ಜೊಳ್ಳು
ಜೋಳಿಗೆಗೆ ತುಂಬಿದೆ ಬಯಲು
ಈ ಮಾತೇನು ನಡೆದುದಲ್ಲಾ ನುಡಿದುದಲ್ಲಾ
ಬಯಲು ಆಡಿಸಿದುದು
ಅನುಭಾವವೆಂಬುದು ಬಯಲೇ
ಏಕತಾರಿ ಯ ತಂತಿ ನುಡಿಸಿದ ನಿಸದ್ದು.
Comments 1
ರವೀಂದ್ರ ಸುಂಕಾಪುರ
May 19, 2022ಅನುಭಾವವನ್ನು ಅನುಭಾವಿ ಕವಿ ಹೇಳುವ ಮಾತುಗಳು ರಹಸ್ಯ ಒಡಪುಗಳಂತಿರುತ್ತವೆ. ನಿಮ್ಮ ಕವನಗಳ ಕೆಲವು ಸಾಲುಗಳು ಚಿಂತನೆಗೆ ಹಚ್ಚುತ್ತವೆ.