ಮಣ್ಣು ಮೆಟ್ಟಿದ ದಾರಿ
ಈ
ಸಿಟ್ಟು ದ್ವೇಷ
ಪ್ರೇಮ ಕಾಮ ಮದ…
ಎಲ್ಲಾ ನಾನು ಹೊತ್ತು
ಹೋಗುವನೇ…
ಈ
ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ
ಇದೆಲ್ಲಾ ಮಣ್ಣಾಗುವುದು
ಇದ್ದೇ ಇದೆ
ನಾನು ಮಣ್ಣಾಗುವ ಮೊದಲು
ಮಣ್ಣಾಗವು
ಬಿಡಪ್ಪಾ
ನನ್ನ ಹೆಜ್ಜೆಯ ದಾರಿ
ನಿನ್ನ ಹೆಜ್ಜೆಯ ದಾರಿ
ಬೇರೇನೂ…
ಮಣ್ಣು ಮೆತ್ತಿದ ದಾರಿ ನನ್ನದು
ಮಣ್ಣು ಮೆಟ್ಟಿದ ದಾರಿ ನಿನ್ನದು
ನಾನು
ಯೋಚಿಸುದುದೇ ನನ್ನ
ಪ್ರಜ್ಞೆಯೇ
ಅಲ್ಲಾ
ನನ್ನ ಪ್ರಜ್ಞೆ ನನ್ನ ಯೋಚನೆಯ
ಎಚ್ಚರದಲಿರಿಸಿದೆ
ಕಣ್ಣಿನ ತಂಪು
ಕಿವಿಯ ಇಂಪು
ಎಲ್ಲಾ ಸುಕ್ಕು
ಮಾಗಿದೆ ಕಾಯ
ಇಲ್ಲೇ ಎಲ್ಲೋ ಇದೆ
ಮರೆವು
ಅರಳಿದ ಹೂವೇ
ನೀನಿರು ನಾನೋಗುವೆ.
Comments 1
Padmalaya
Oct 6, 2021ಬಹಳ ಚೆನ್ನಾಗಿ ಹೃದಯ ಹದವಾಗುಯತ್ತಿರುವ ಪರಿಯೊಂದನ್ನ ಈ ಕವನ ನನಗೆ ಸೂಚಿಸುತ್ತಿದೆ. ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ನ್ಯಾಯೋಚಿತವಾಗಿದೆ….