ಗಡಿಯಲ್ಲಿ ನಿಂತು…
ಈ
ಬಯಲಲಿ
ಕುಳಿತು ಹಿಂದಣ
ಹೆಜ್ಜೆಗಳ ಎಣಿಸುತಿರುವೆ ಖಾಲಿ
ಮುಖವಿಲ್ಲದ ನಾಳೆಗಳು
ಮುಖವಾಡದ ನಿನ್ನೆಗಳು
ಮುಖಾಮುಖಿ ಯ ಇಂದು
ಈ
ಅರಳಿದ
ಅರಳೆ ರಾಟೆಯಲಿ
ಸಿಲುಕಿ ನೂಲು ಹಾಸು ಹೊಕ್ಕು
ಬಟ್ಟೆ ದಿಕ್ಕು ತಪ್ಪಿತೇ ಎಳೆ
ಇಂದು
ಹುಣ್ಣುಮೆ ಮೂಡಲ
ಕನ್ನಡಿಯಲಿ ಉದಯಿಸಿರುವ
ಭಾನು ತಣ್ಣಗೆ
ಈ
ಹುಟ್ಟಿಗೆ
ನಕ್ಕವರು ಯಾರು ಸಾವರೇ..
ಊರಿಲ್ಲದ ಊರ
ಗಡಿಯ ದಾಟಲಿ ಹೇಗೆ?
Comments 2
Rajesh R
May 16, 2021ಮುಖವಿಲ್ಲದ ನಾಳೆಗಳು, ಮುಖವಾಡದ ನಿನ್ನೆಗಳು… ಆಹಾ ಸುಂದರ ಸಾಲುಗಳು.
Padmalaya
May 26, 2021ಸಂಪ್ರದಾಯಿಕ ಕಾವ್ಯ ಪರಂಪರೆಯ ಹಂಗಿಲ್ಲದೆ ಬಯಲಕಾವ್ಯದ ಬೆಡಗೊಂದು ಹೇಗಿದ್ದಾತು? ಎಂಬುದು ಜೋತಿಲಿಂಗಪ್ಪನವರ ಲೇಖನಿಯಲ್ಲಿ ಸುಲಲಿತವಾಗಿ ಸಾಗುತ್ತದೆ.ಏನನ್ನೂ ದಕ್ಕಿಸಿಕೊಳ್ಳದೇ ಖಾಲಿಯಾಗೇ ಉಳಿದು ಶೂನ್ನ ರಸದಲ್ಲಿ ಶೂನ್ಯವಾದ ನಿಗೂಢವನ್ನ ನಿಗೂಢವಾಗಿಸಿ ನಿಷ್ಯೇಶತನ ಕಾಡುವಂತಹ ಶಿಕ್ಷೆ ನೀಡುವುದು ಅವರ ಕಾವ್ಯದ ಲಕ್ಷಣ.ಆದ್ದರಿಂದಲೇ ಅವರ ಬರಹದ ಓದು ಯಾವುದಕ್ಕೂ ದಕ್ಕದೇ ನಮ್ಮ ಜ್ಞಾನದ ಅಹಂಕಾರಶನ್ನ ಅಪಹಾಸ್ಯ ಮಾಡಿ ಕಂಗೆಡಿಸಿಬಿಡುತ್ತದೆ…..ಹೀಗೆ ಅವರು ಬರೆಯುತ್ತಲೇ ಇರಲಿ……