Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಡಿಯಲ್ಲಿ ನಿಂತು…
Share:
Poems May 6, 2021 ಜ್ಯೋತಿಲಿಂಗಪ್ಪ

ಗಡಿಯಲ್ಲಿ ನಿಂತು…

ಈ
ಬಯಲಲಿ
ಕುಳಿತು ಹಿಂದಣ
ಹೆಜ್ಜೆಗಳ ಎಣಿಸುತಿರುವೆ ಖಾಲಿ

ಮುಖವಿಲ್ಲದ ನಾಳೆಗಳು
ಮುಖವಾಡದ ನಿನ್ನೆಗಳು
ಮುಖಾಮುಖಿ ಯ ಇಂದು

ಈ
ಅರಳಿದ
ಅರಳೆ ರಾಟೆಯಲಿ
ಸಿಲುಕಿ ನೂಲು ಹಾಸು ಹೊಕ್ಕು
ಬಟ್ಟೆ ದಿಕ್ಕು ತಪ್ಪಿತೇ ಎಳೆ

ಇಂದು
ಹುಣ್ಣುಮೆ ಮೂಡಲ
ಕನ್ನಡಿಯಲಿ ಉದಯಿಸಿರುವ
ಭಾನು ತಣ್ಣಗೆ

ಈ
ಹುಟ್ಟಿಗೆ
ನಕ್ಕವರು ಯಾರು ಸಾವರೇ..

ಊರಿಲ್ಲದ ಊರ
ಗಡಿಯ ದಾಟಲಿ ಹೇಗೆ?

Previous post ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
Next post ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ

Related Posts

ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...
ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...

Comments 2

  1. Rajesh R
    May 16, 2021 Reply

    ಮುಖವಿಲ್ಲದ ನಾಳೆಗಳು, ಮುಖವಾಡದ ನಿನ್ನೆಗಳು… ಆಹಾ ಸುಂದರ ಸಾಲುಗಳು.

  2. Padmalaya
    May 26, 2021 Reply

    ಸಂಪ್ರದಾಯಿಕ ಕಾವ್ಯ ಪರಂಪರೆಯ ಹಂಗಿಲ್ಲದೆ ಬಯಲಕಾವ್ಯದ ಬೆಡಗೊಂದು ಹೇಗಿದ್ದಾತು? ಎಂಬುದು ಜೋತಿಲಿಂಗಪ್ಪನವರ ಲೇಖನಿಯಲ್ಲಿ ಸುಲಲಿತವಾಗಿ ಸಾಗುತ್ತದೆ.ಏನನ್ನೂ ದಕ್ಕಿಸಿಕೊಳ್ಳದೇ ಖಾಲಿಯಾಗೇ ಉಳಿದು ಶೂನ್ನ ರಸದಲ್ಲಿ ಶೂನ್ಯವಾದ ನಿಗೂಢವನ್ನ ನಿಗೂಢವಾಗಿಸಿ ನಿಷ್ಯೇಶತನ ಕಾಡುವಂತಹ ಶಿಕ್ಷೆ ನೀಡುವುದು ಅವರ ಕಾವ್ಯದ ಲಕ್ಷಣ.ಆದ್ದರಿಂದಲೇ ಅವರ ಬರಹದ ಓದು ಯಾವುದಕ್ಕೂ ದಕ್ಕದೇ ನಮ್ಮ ಜ್ಞಾನದ ಅಹಂಕಾರಶನ್ನ ಅಪಹಾಸ್ಯ ಮಾಡಿ ಕಂಗೆಡಿಸಿಬಿಡುತ್ತದೆ…..ಹೀಗೆ ಅವರು ಬರೆಯುತ್ತಲೇ ಇರಲಿ……

Leave a Reply to Rajesh R Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಆಸರೆ
ಆಸರೆ
August 6, 2022
ಗುರುವಂದನೆ
ಗುರುವಂದನೆ
October 13, 2022
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
June 14, 2024
Copyright © 2025 Bayalu